ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್ | ಲ್ಯಾನಿಂಗ್ ಆಟಕ್ಕೆ ಒಲಿದ ಜಯ; ಸೆಮಿಗೆ ಆಸ್ಟ್ರೇಲಿಯಾ

Last Updated 19 ಮಾರ್ಚ್ 2022, 17:27 IST
ಅಕ್ಷರ ಗಾತ್ರ

ಆಕ್ಲೆಂಡ್: ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡವು ಶನಿವಾರ ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್‌ನಲ್ಲಿ ಮಿಂಚಿತು. ಆದರೆ, ಬೌಲಿಂಗ್‌ನಲ್ಲಿ ಮಂಕಾಯಿತು.

ಇದರಿಂದಾಗಿ 6 ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ಶನಿವಾರ ನಡೆದ ಪಂದ್ಯದಲ್ಲಿಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಆರಂಭಿಕ ಜೋಡಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ವೈಫಲ್ಯ ಅನುಭವಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಯಷ್ಟಿಕಾ ಭಾಟಿಯಾ (59; 83ಎ), ಮಿಥಾಲಿ ರಾಜ್ (68; 96ಎ) ಮತ್ತು ಹರ್ಮನ್‌ಪ್ರೀತ್ ಕೌರ್ (ಔಟಾಗದೆ 57) ಅರ್ಧಶತಕ ಗಳಿಸಿದರು.

ಅದರಿಂದಾಗಿ 50 ಓವರ್‌ಗಳಲ್ಲಿ 7ಕ್ಕೆ277 ರನ್‌ಗಳ ಹೋರಾಟದ ಮೊತ್ತ ಗಳಿಸಿತು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ನಾಯಕಿ ಮೆಗ್‌ ಲ್ಯಾನಿಂಗ್ (97; 107ಎ) ಮತ್ತು ಅಲೀಸಾ ಹೀಲಿ (72; 65ಎ) ಅವರ ಸುಂದರ ಬ್ಯಾಟಿಂಗ್ ಬಲದಿಂದ 49.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 280 ರನ್ ಗಳಿಸಿತು.

ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಸತತ ಐದನೇ ಜಯ ಸಾಧಿಸಿತು. ತಮ್ಮ ವೃತ್ತಿಜೀವನದ 200ನೇ ಏಕದಿನ ಪಂದ್ಯವಾಡಿದ ಜೂಲನ್ ಗೋಸ್ವಾಮಿ ಒಂದೂ ವಿಕೆಟ್ ಪಡೆಯಲಿಲ್ಲ. ಅಲ್ಲದೇ ದುಬಾರಿಯೂ ಆದರು. ಮೇಘನಾ ಸಿಂಗ್ ಒಂದು ವಿಕೆಟ್ ಗಳಿಸಿದರೂ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಆದರು.

ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಅವರು ಪರಿಣಾಮಕಾರಿಯಾಗಲಿಲ್ಲ. ಪೂಜಾ (43ಕ್ಕೆ2) ಅವರ ಪ್ರಯತ್ನಕ್ಕೆ ಜಯ ಒಲಿಯಲಿಲ್ಲ.

ಇದರಿಂದಾಗಿ ಮಿಥಾಲಿ ಬಳಗವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಿಳಿಯಿತು. ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಬಾಂಗ್ಲಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಭಾರತವು ಎದುರಿಸಲಿದೆ. ಎರಡರಲ್ಲೂ ಗೆದ್ದರೆ ಅಗ್ರ ನಾಲ್ಕರಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಬಹುದು.

ಸ್ಕೋರ್ ಕಾರ್ಡ್
ಭಾರತ:7ಕ್ಕೆ277 (50 ಓವರ್‌ಗಳಲ್ಲಿ)
ಆಸ್ಟ್ರೇಲಿಯಾ:
4ಕ್ಕೆ280 (49.3 ಓವರ್‌ಗಳಲ್ಲಿ)
ಫಲಿತಾಂಶ:
ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT