ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens World Cup: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಉತ್ತಮ ಆರಂಭ

Last Updated 27 ಮಾರ್ಚ್ 2022, 3:46 IST
ಅಕ್ಷರ ಗಾತ್ರ

ಕ್ರೈಸ್ಟ್ ಚರ್ಚ್‌: ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದೆ. ಅನುಭವಿ ಸ್ಮೃತಿ ಮಂದಾನ ಮತ್ತು ಯುವ ಬ್ಯಾಟರ್ ಶೆಫಾಲಿ ವರ್ಮಾ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ.

ಕಳೆದ ಬಾರಿಯ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತ ಈ ಆವೃತ್ತಿಯಲ್ಲಿ ಇದುವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆರು ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರವೇ ಗೆಲುವು ಸಾಧಿಸಿ, ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಉಳಿದಿದೆ. ಹೀಗಾಗಿ, ಸೆಮಿಫೈನಲ್‌ ತಲುಪಲು ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಸದ್ಯ 14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಭಾರತ ವಿಕೆಟ್‌ ನಷ್ಟವಿಲ್ಲದೆ 90ರನ್ ಗಳಿಸಿದೆ. ಆರಂಭದಿಂದಲೇ ಬೀಸಾಟಕ್ಕೆ ಒತ್ತುಕೊಟ್ಟ ಶೆಫಾಲಿ, 41 ಎಸೆತಗಳಲ್ಲಿ 52 ರನ್‌ ಬಾರಿಸಿದ್ದಾರೆ. ಅವರಿಗೆ ಉತ್ತಮ ಬೆಂಬಲ ನೀಡುತ್ತಿರುವ ಮಂದಾನ 44 ಎಸೆತಗಳಲ್ಲಿ 32 ರನ್‌ ಗಳಿಸಿ ತಾಳ್ಮೆಯಿಂದ ಆಡುತ್ತಿದ್ದಾರೆ.

ಬಾಂಗ್ಲಾ ಗೆಲುವಿಗೆ 235ರನ್ ಗುರಿ ನೀಡಿದ ಇಂಗ್ಲೆಂಡ್
ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಿವೆ. ಟಾಸ್‌ ಗೆದ್ದು ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲ ಪಡೆ, ಮಧ್ಯಕ್ರಮಾಂಕದ ಬ್ಯಾಟರ್‌ ಸೋಫಿಯಾ ಡಂಕ್ಲೆ (67) ಮತ್ತು ನಥಾಲೀ ಸ್ಕೀವರ್ (40) ಬ್ಯಾಟಿಂಗ್‌ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 234 ರನ್ ಗಳಿಸಿದೆ.

ಸೆಮಿಫೈನಲ್ ಲೆಕ್ಕಾಚಾರ
ಗುಂಪು ಹಂತದಲ್ಲಿ ಆಡಿರುವಏಳೂ ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿರುವ ಆಸ್ಟ್ರೇಲಿಯಾ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.ಆರು ಪಂದ್ಯಗಳಿಂದ 4 ಜಯ ಮತ್ತು ರದ್ದಾದ ಒಂದು ಪಂದ್ಯದಲ್ಲಿ ಸಿಕ್ಕ 1 ಅಂಕ ಸೇರಿ ಒಟ್ಟು 9 ಪಾಯಿಂಟ್‌ ಹೊಂದಿರುವ ದಕ್ಷಿಣ ಆಫ್ರಿಕಾ ನಂತರದ ಸ್ಥಾನದಲ್ಲಿದೆ.

ಏಳು ಪಂದ್ಯಗಳಿಂದ 7 ಅಂಕ ಕಲೆಹಾಕಿರುವ ವೆಸ್ಟ್‌ ಇಂಡೀಸ್‌ ಮೂರನೇ ಸ್ಥಾನದಲ್ಲಿದೆಯಾದರೂ, ಸೆಮಿಫೈನಲ್‌ ಪ್ರವೇಶ ಇನ್ನೂ ಖಚಿತವಾಗಿಲ್ಲ. ತಲಾ ಆರು ಪಂದ್ಯಗಳನ್ನು ಆಡಿ (ಮೂರು ಜಯ, ಮೂರು ಸೋಲಿನೊಂದಿಗೆ) ಆರು ಅಂಕಗಳನ್ನು ಹೊಂದಿರುವ ಇಂಗ್ಲೆಂಡ್‌ ಮತ್ತು ಭಾರತ ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿವೆ. ಈ ಎರಡರಲ್ಲಿ ಒಂದುತಂಡವಾದರೂ ಇಂದು ಸೋತರಷ್ಟೇ,ವಿಂಡೀಸ್‌ ನಾಲ್ಕರ ಘಟ್ಟಕ್ಕೇರಲು ಸಾಧ್ಯ.

6 ಪಾಯಿಂಟ್‌ ಹೊಂದಿರುವ ನ್ಯೂಜಿಲೆಂಡ್‌, ರನ್‌ ರೇಟ್ ಆಧಾರದಲ್ಲಿ ಸದ್ಯ 6ನೇ ಸ್ಥಾನದಲ್ಲಿದೆ. ಹೀಗಾಗಿಇಂಗ್ಲೆಂಡ್‌ ಮತ್ತು ಭಾರತ ತಂಡಗಳು ಇಂದಿನ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋತರೆ ಮಾತ್ರ, ರನ್‌ ರೇಟ್ ಆಧಾರದಲ್ಲಿನ್ಯೂಜಿಲೆಂಡ್‌ ಸೆಮಿಫೈನಲ್‌ಗೆತಲುಪಬಹುದು.

ಹೀಗಾಗಿ ನಾಲ್ಕರ ಹಂತಕ್ಕೆ ತಲುಪುವ ಇನ್ನೆರಡು ತಂಡಗಳು ಯಾವುವು ಎಂಬುದು ಇಂದಿನ ಪಂದ್ಯಗಳ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ.ತಲಾ ಒಂದೊಂದು ಗೆಲುವು ಕಂಡಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT