ನವಿ ಮುಂಬೈ: ಮಹಿಳಾ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾ ತಂಡಕ್ಕೆ 299 ರನ್ ಗುರಿ ನೀಡಿದೆ.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಭಾರತ ತಂಡವು ಹಲವು ದಾಖಲೆಗಳನ್ನು ಬರೆದಿದೆ.

ವಿಶ್ವಕಪ್ ಫೈನಲ್ನಲ್ಲಿ ಶತಕದ ಜೊತೆಯಾಟ: ಭಾರತ ಮಹಿಳಾ ತಂಡವು ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ನಲ್ಲಿ ಶತಕದ ಜೊತೆಯಾಟವಾಡಿತು. ಆರಂಭಿಕ ಆಟಗಾರ್ತಿ ಶಫಾಲಿ ಹಾಗೂ ಸ್ಮೃತಿ 104 ರನ್ ಜೊತೆಯಾಟವಾಡಿದರು. ಇದು ವಿಶ್ವಕಪ್ ಫೈನಲ್ನಲ್ಲಿ ದಾಖಲಾದ ಎರಡನೇ ಶತಕದ ಜೊತೆಯಾಟವಾಗಿದೆ. 2022ರಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಈ ದಾಖಲೆ ಬರೆದಿತ್ತು.

13 ಇನಿಂಗ್ಸ್ ನಂತರ ಶಫಾಲಿ ಅರ್ಧಶತಕ: ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಏಕದಿನ ಪಂದ್ಯದಲ್ಲಿ 13 ಇನಿಂಗ್ಸ್ಗಳ ನಂತರ ಅರ್ಧಶತಕ ದಾಖಲಿಸಿದರು. ಕೊನೆಯ ಬಾರಿ 2022ರ ಜುಲೈನಲ್ಲಿ ಅವರು ಅರ್ಧಶತಕ ಸಿಡಿಸಿದ್ದರು.

ವಿಶ್ವಕಪ್ ನಾಕೌಟ್ನಲ್ಲಿ ಅತಿಹೆಚ್ಚು ರನ್ಗಳಿಸಿದ ಹರ್ಮನ್ಪ್ರೀತ್: ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಅತಿಹೆಚ್ಚು ರನ್ಗಳಿಸಿದ ಆಟಗಾರ್ತಿ ಎನ್ನುವ ಹಿರಿಮೆಗೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಭಾಜನರಾದರು. 4 ಇನಿಂಗ್ಸ್ನಲ್ಲಿ ಅವರು 331 ರನ್ಗಳಿಸಿದ್ದು, 6 ಇನಿಂಗ್ಸ್ನಲ್ಲಿ 330 ರನ್ಗಳಿಸಿದ್ದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಮುರಿದರು.

ವಿಶ್ವಕಪ್ನಲ್ಲಿ 200 ರನ್, 15 ವಿಕೆಟ್ ಪಡೆದ ದೀಪ್ತಿ: ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಅವರು ಈ ಬಾರಿಯ ವಿಶ್ವಕಪ್ನಲ್ಲಿ 200ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಪಡೆಯುವ ಮೂಲಕ, ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿಯಾಗಿದ್ದಾರೆ.

ಶತಕವಿಲ್ಲದೇ ದಾಖಲಾದ ಮೂರನೇ ಅತಿದೊಡ್ಡ ಮೊತ್ತ: ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 298 ರನ್ಗಳಿಸಿದ್ದು, ಈ ಪಂದ್ಯದಲ್ಲಿ ಯಾವುದೇ ಶತಕಗಳು ದಾಖಲಾಗಿಲ್ಲ. ವೈಯಕ್ತಿಕ ಶತಕಗಳು ದಾಖಲಾಗದೇ ಇರುವ ಪಂದ್ಯದಲ್ಲಿ ದಾಖಲಾದ ಮೂರನೇ ಅತಿದೊಡ್ಡ ಮೊತ್ತ ಇದಾಗಿದೆ. ಇದೆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು ಯಾವುದೇ ಶತಕಗಳಿಲ್ಲದೇ 330 ರನ್ಗಳಿಸಿತ್ತು.

ಕೊನೆಯ 10 ಓವರ್ಗಳಲ್ಲಿ ದಾಖಲೆಯ ರನ್ ಬಾರಿಸಿದ ರೀಚಾ ಘೋಷ್: ಭಾರತದ ರೀಚಾ ಘೋಷ್ ಅವರು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 40 ರಿಂದ 50 ಓವರ್ಗಳಲ್ಲಿ 165.17ರ ಸ್ಟ್ರೈಕ್ ರೇಟ್ನಲ್ಲಿ 185 ರನ್ಗಳಿದ್ದಾರೆ. ಈ ಟೂರ್ನಿಯಲ್ಲಿ ಬ್ಯಾಟರ್ ಒಬ್ಬರು ಕೊನೆಯ 10 ಓವರ್ಗಳಲ್ಲಿ ದಾಖಲಿಸಿದ ಅತಿಹೆಚ್ಚು ರನ್ ಇದಾಗಿದೆ.

ವಿಶ್ವಕಪ್ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಘೋಷ್: ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿ ಎನ್ನುವ ದಾಖಲೆಗೆ ರೀಚಾ ಘೋಷ್ ಪಾತ್ರರಾದರು. ಈ ಟೂರ್ನಿಯಲ್ಲಿ ಅವರು 12 ಸಿಕ್ಸರ್ ಸಿಡಿಸುವ ಮೂಲಕ, 2013ರ ವಿಶ್ವಕಪ್ನಲ್ಲಿ 12 ಸಿಕ್ಸರ್ ಸಿಡಿಸಿದ್ದ ಡಿಯಾಂಡ್ರಾ ಡಾಟಿನ್ ಹಾಗೂ 2017ರ ವಿಶ್ವಕಪ್ನಲ್ಲಿ 12 ಸಿಕ್ಸರ್ ಬಾರಿಸಿದ್ದ ಲಿಜೆಲ್ಲೆ ಲೀ ದಾಖಲೆಯನ್ನು ಸರಿಗಟ್ಟಿದರು. ದಕ್ಷಿಣ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್ ಅವರು 10 ಸಿಕ್ಸರ್ ಹೊಡೆದಿದ್ದು, ಒಂದು ವೇಳೆ ಫೈನಲ್ನಲ್ಲಿ 3 ಸಿಕ್ಸರ್ ಬಾರಿಸಿದರೆ, ಈ ದಾಖಲೆ ಅವರ ಪಾಲಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.