ಶನಿವಾರ, 4 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ: ಭಾರತೀಯ ಬ್ಯಾಟರ್‌ಗಳದ್ದೇ ಮೇಲುಗೈ

Published 8 ನವೆಂಬರ್ 2023, 13:45 IST
Last Updated 8 ನವೆಂಬರ್ 2023, 13:45 IST
ಅಕ್ಷರ ಗಾತ್ರ

ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಮೊದಲ ದ್ವಿಶತಕ ಗಳಿಸಿದ ಹೆಗ್ಗಳಿಕೆ ಭಾರತದ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರದ್ದು. ಅವರು 2010ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಅದಾದ ಬಳಿಕ ಈ ವರೆಗೆ ಒಟ್ಟು 11 ದ್ವಿಶತಕಗಳು ಈ ಮಾದರಿಯಲ್ಲಿ ದಾಖಲಾಗಿವೆ. ಯಾರು? ಯಾವಾಗ? ಈ ಸಾಧನೆ ಮಾಡಿದ್ದಾರೆ ಎಂಬ ವಿವರ ಇಲ್ಲಿದೆ.

01. ಸಚಿನ್ ತೆಂಡೂಲ್ಕರ್: ಭಾರತ

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಪಿಟಿಐ ಚಿತ್ರ

ಸಚಿನ್ ತೆಂಡೂಲ್ಕರ್

ಪಿಟಿಐ ಚಿತ್ರ

ಸಚಿನ್‌ ತೆಂಡೂಲ್ಕರ್‌ ಅವರು 2010ರ ಫೆಬ್ರುವರಿ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್‌ನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 200 ರನ್‌ ಗಳಿಸಿದ್ದರು. ಇದು ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ.

02. ವಿರೇಂದ್ರ ಸೆಹ್ವಾಗ್: ಭಾರತ

ವಿರೇಂದ್ರ ಸೆಹ್ವಾಗ್

ವಿರೇಂದ್ರ ಸೆಹ್ವಾಗ್

ಪಿಟಿಐ ಚಿತ್ರ

ವಿರೇಂದ್ರ ಸೆಹ್ವಾಗ್

ಪಿಟಿಐ ಚಿತ್ರ

ವೀರೇಂದ್ರ ಸೆಹ್ವಾಗ್‌ 2011ರ ಡಿಸೆಂಬರ್‌ 08ರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ 219 ರನ್‌ ಗಳಿಸಿದ್ದರು.

03. ರೋಹಿತ್‌ ಶರ್ಮಾ: ಭಾರತ

ರೋಹಿತ್‌ ಶರ್ಮಾ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್ ಶರ್ಮಾ 2013ರ ನವೆಂಬರ್‌ 2ರಂದು ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ 209 ರನ್‌ ಗಳಿಸಿದ್ದರು. ಇದು ಅವರ ಮೊದಲ ದ್ವಿಶತಕ.

04. ರೋಹಿತ್ ಶರ್ಮಾ: ಭಾರತ

ರೋಹಿತ್‌ ಶರ್ಮಾ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್ ಅವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ದ್ವಿಶತಕವನ್ನು 2014ರ ನವೆಂಬರ್‌ 13ರಂದು ಸಿಡಿಸಿದರು. ಶ್ರೀಲಂಕಾ ವಿರುದ್ಧ ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಅವರು 264 ರನ್‌ ಗಳಿಸಿದ್ದರು. ಇದು, ಏಕದಿನ ಕ್ರಿಕೆಟ್‌ನ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ.

05. ಕ್ರಿಸ್‌ ಗೇಲ್‌: ವೆಸ್ಟ್‌ ಇಂಡೀಸ್‌

ಕ್ರಿಸ್‌ ಗೇಲ್‌

ಕ್ರಿಸ್‌ ಗೇಲ್‌

ಪಿಟಿಐ ಚಿತ್ರ

ಕ್ರಿಸ್‌ ಗೇಲ್‌

ಪಿಟಿಐ ಚಿತ್ರ

ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಗೇಲ್‌ ಅವರು 2015ರ ಫೆಬ್ರುವರಿ 24ರಂದು ಜಿಂಬಾಬ್ವೆ ವಿರುದ್ಧ ಕ್ಯಾನ್‌ಬೆರಾದಲ್ಲಿ 215 ರನ್‌ ಗಳಿಸಿದ್ದರು. ಇದು ವಿಶ್ವಕಪ್‌ ಪಂದ್ಯವೊಂದರಲ್ಲಿ ದಾಖಲಾದ ಮೊದಲ ದ್ವಿಶತಕ.

06. ಮಾರ್ಟಿನ್‌ ಗಪ್ಟಿಲ್‌: ನ್ಯೂಜಿಲೆಂಡ್‌

ಮಾರ್ಟಿನ್‌ ಗಪ್ಟಿಲ್‌

ಮಾರ್ಟಿನ್‌ ಗಪ್ಟಿಲ್‌

ಪಿಟಿಐ ಚಿತ್ರ

ಮಾರ್ಟಿನ್‌ ಗಪ್ಟಿಲ್‌

ಪಿಟಿಐ ಚಿತ್ರ

ಮಾರ್ಟಿನ್‌ ಗಪ್ಟಿಲ್‌ ಅವರು 2015ರ ಮಾರ್ಚ್‌ 11ರಂದು ವೆಸ್ಟ್ ಇಂಡೀಸ್‌ ವಿರುದ್ಧ ಅಜೇಯ 237 ರನ್‌ ಗಳಿಸಿದ್ದರು. ಇದು ವಿಶ್ವಕಪ್‌ ಇತಿಹಾಸದಲ್ಲಿ ಬ್ಯಾಟರ್‌ವೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ.

07. ರೋಹಿತ್ ಶರ್ಮಾ: ಭಾರತ

ರೋಹಿತ್‌ ಶರ್ಮಾ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್‌ ಶರ್ಮಾ

ಪಿಟಿಐ ಚಿತ್ರ

ರೋಹಿತ್‌ ಶರ್ಮಾ ಅವರು 2017ರ ಡಿಸೆಂಬರ್‌ 13ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಜೇಯ 208 ರನ್ ಗಳಿಸಿದರು. ಆ ಮೂಲಕ ಏಕದಿನ ಮಾದರಿಯಲ್ಲಿ ಮೂರು ಬಾರಿ ಇನ್ನೂರು ರನ್‌ ಗಳಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್‌ ಎನಿಸಿಕೊಂಡರು.

08. ಫಕಾರ್‌ ಜಮಾನ್: ಪಾಕಿಸ್ತಾನ

ಫಕಾರ್‌ ಜಮಾನ್

ಫಕಾರ್‌ ಜಮಾನ್

ಪಿಟಿಐ ಚಿತ್ರ

ಫಕಾರ್‌ ಜಮಾನ್

ಪಿಟಿಐ ಚಿತ್ರ

ಪಾಕಿಸ್ತಾನದ ಫಕಾರ್‌ ಜಮಾನ್‌ 2018ರ ಜುಲೈ 20ರಂದು ಜಿಂಬಾಬ್ವೆ ವಿರುದ್ಧ ಬುಲವಾಯೊದಲ್ಲಿ ಅಜೇಯ 210 ರನ್ ಗಳಿಸಿದ್ದರು.

09. ಇಶಾನ್ ಕಿಶನ್: ಭಾರತ

ಇಶಾನ್ ಕಿಶನ್

ಇಶಾನ್ ಕಿಶನ್

ಪಿಟಿಐ ಚಿತ್ರ

ಇಶಾನ್ ಕಿಶನ್

ಪಿಟಿಐ ಚಿತ್ರ

ಭಾರತದ ಎಡಗೈ ಬ್ಯಾಟರ್‌ ಇಶಾನ್‌ ಕಿಶಾನ್‌ 2022ರ ಡಿಸೆಂಬರ್‌ 10ರಂದು ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು. ಇದು ವೇಗದ ದ್ವಿಶತಕ ಎನಿಸಿದೆ.

10. ಶುಭಮನ್ ಗಿಲ್‌: ಭಾರತ

ಶುಭಮನ್ ಗಿಲ್‌

ಶುಭಮನ್ ಗಿಲ್‌

ಪಿಟಿಐ ಚಿತ್ರ

ಶುಭಮನ್ ಗಿಲ್‌

ಪಿಟಿಐ ಚಿತ್ರ

ಭಾರತ ತಂಡದ ಭರವಸೆಯ ಬ್ಯಾಟರ್‌ ಶುಭಮನ್‌ ಗಿಲ್‌ ಅವರು 2023ರ ಜನವರಿ 18ರಂದು ನ್ಯೂಜಿಲೆಂಡ್‌ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 208 ರನ್‌ ಗಳಿಸಿದ್ದರು.

11. ಗ್ಲೆನ್‌ ಮ್ಯಾಕ್ಸ್‌ವೆಲ್‌: ಆಸ್ಟ್ರೇಲಿಯಾ

ಗ್ಲೆನ್‌ ಮ್ಯಾಕ್ಸ್‌ವೆಲ್‌

ಗ್ಲೆನ್‌ ಮ್ಯಾಕ್ಸ್‌ವೆಲ್‌

ಪಿಟಿಐ ಚಿತ್ರ

ಗ್ಲೆನ್‌ ಮ್ಯಾಕ್ಸ್‌ವೆಲ್‌

ಪಿಟಿಐ ಚಿತ್ರ

ಆಸ್ಟ್ರೇಲಿಯಾದ ಗ್ಲೆನ್‌ ಮಾಕ್ಸ್‌ವೆಲ್‌ ಅವರು 2023ರ ನವೆಂಬರ್‌ 7ರಂದು ಅಫ್ಗಾನಿಸ್ತಾನ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 201 ರನ್‌ ಸಿಡಿಸಿದರು. ಈ ಮಾದರಿಯಲ್ಲಿ ಆರಂಭಿಕನಲ್ಲದ ಬ್ಯಾಟರ್‌ವೊಬ್ಬ ಗಳಿಸಿದ ಹಾಗೂ ಗುರಿ ಬೆನ್ನತ್ತುವ ವೇಳೆ ಯಾವುದೇ ಬ್ಯಾಟರ್‌ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT