ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

'ಕ್ರಿಕೆಟ್ ಕಾಶಿ' ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 282 ರನ್ ಗುರಿ ಪಡೆದ ತೆಂಬಾ ಬವುಮಾ ಪಡೆಗೆ ಆರಂಭಿಕ ಏಡನ್ ಮರ್ಕರಂ ಆಸರೆಯಾದರು. ಅವರ ಶತಕದಾಟದ ಬಲದಿಂದ ಹರಿಣಗಳ ನಾಡಿನ ತಂಡ 5 ವಿಕೆಟ್ಗಳನ್ನು ಕಳೆದುಕೊಂಡು 285 ರನ್ ಗಳಿಸಿ ಜಯದ ನಗೆ ಬೀರಿತು.

ಆಸಿಸ್ ಕನಸಿಗೆ ಕೊಳ್ಳಿ ಇಟ್ಟ ಮರ್ಕ್ರಂ
ಸವಾಲಿನ ಗುರಿ ಎದುರು ಮೂರನೇ ದಿನವೇ ಬ್ಯಾಟಿಂಗ್ ಆರಂಭಿಸಿದ ಆಫ್ರಿಕನ್ನರಿಗೆ ವೇಗಿ ಮಿಚೇಲ್ ಸ್ಟಾರ್ಕ್ ಆರಂಭದಲ್ಲೇ ಪೆಟ್ಟು ನೀಡಿದರು. ಮರ್ಕರಂ ಜೊತೆ ಕ್ರೀಸ್ಗಿಳಿದ ರಿಯಾನ್ ರಿಕೆಲ್ಟನ್ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ, ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಪಡೆ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಕನಸು ಕಂಡಿತ್ತು. ಆ ಕನಸಿಗೆ ಮರ್ಕರಂ ಕೊಳ್ಳಿ ಇಟ್ಟರು.

2ನೇ ವಿಕೆಟ್ ಪಾಲುದಾರಿಕೆಯಲ್ಲಿ ವಿಯಾನ್ ಮುಲ್ಡರ್ (27 ರನ್) ಜೊತೆಗೂಡಿ 61 ರನ್ ಕೂಡಿಸಿದ ಅವರು, 3ನೇ ವಿಕೆಟ್ ಪಾಲುದಾರಿಕೆಯಲ್ಲಿ ನಾಯಕ ತೆಂಬಾ ಜೊತೆ 147 ರನ್ ಕಲೆಹಾಕಿದರು. 134 ಎಸೆತಗಳಲ್ಲಿ 66 ರನ್ ಗಳಿಸಿದ್ದ ತೆಂಬಾ ಔಟಾದ ನಂತರವೂ ತಂಡದ ಕೈಬಿಡಲಿಲ್ಲ ಮರ್ಕ್ರಂ.

ಐಸಿಸಿ ಟೂರ್ನಿಗಳ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಪರ ಮೊದಲ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡ ಅವರು ಬರೋಬ್ಬರಿ 207 ಎಸೆತಗಳಲ್ಲಿ 136 ರನ್ ಗಳಿಸಿದರು.

ಗೆಲ್ಲಲು ಇನ್ನು ಕೇವಲ 6 ರನ್ ಬೇಕಿದ್ದಾಗ ಔಟಾದ ಅವರು, ದೀರ್ಘ ಮಾದರಿಯಲ್ಲಿ ಗಳಿಸಿದ 8ನೇ ನೂರು ಇದು.
.WTC ಫೈನಲ್ನಲ್ಲಿ ಮಿಂಚಿದ ಮರ್ಕ್ರಂ 2014ರ ವಿಶ್ವಕಪ್ ಗೆದ್ದುಕೊಟ್ಟಿದ್ದರು!.
ಕೊನೆಯಲ್ಲಿ ಡೇವಿಡ್ ಬೆಡ್ಡಿಂಗ್ಹ್ಯಾಮ್ (21 ರನ್) ಹಾಗೂ ಕೈಲ್ ವೆರೆಯ್ನ್ (7 ರನ್) ಜಯದ ಲೆಕ್ಕ ಚುಕ್ತಾ ಮಾಡಿದರು. ಇದರೊಂದಿಗೆ, ಸತತ ಎರಡನೇ ಅವಧಿಗೆ ಚಾಂಪಿಯನ್ ಎನಿಸಿಕೊಳ್ಳುವ ಅವಕಾಶ ಕಮಿನ್ಸ್ ಪಡೆಯ ಕೈಯಿಂದ ಜಾರಿತು.

ಆಸ್ಟ್ರೇಲಿಯಾ ಪರ ಮಿಚೇಲ್ ಸ್ಟಾರ್ಕ್ ಮೂರು ವಿಕೆಟ್ ಉರುಳಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಪಡೆದರು.

ಆಸೆ ಅರಳಿಸಿದ್ದ ಸ್ಟಾರ್ಕ್
ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಮಿನ್ಸ್ ಬಳಗ ಮೊದಲ ದಿನವೇ ಸರ್ವಪತನ ಕಂಡಿತ್ತು. 212 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಶುರು ಮಾಡಿದ ಬವುಮ ಪಡೆಯೂ ಸಮರ್ಥ ಬ್ಯಾಟಿಂಗ್ ಮಾಡಲಿಲ್ಲ. ಕೇವಲ 138 ರನ್ಗಳಿಸಿ ಗಂಟುಮೂಟೆ ಕಟ್ಟಿತ್ತು.

74 ರನ್ ಮುನ್ನಡೆ ದೊರೆತರೂ, ಕಾಂಗರೂ ಪಡೆಯ ಬ್ಯಾಟಿಂಗ್ ಎರಡನೇ ಇನಿಂಗ್ಸ್ನಲ್ಲೂ ಸುಧಾರಿಸಲಿಲ್ಲ. ಮೊದಲ ಏಳು ವಿಕೆಟ್ಗಳು ಕೇವಲ 73 ರನ್ಗೆ ಉರುಳಿದ್ದವು. ಈ ಹಂತದಲ್ಲಿ 'ಆಪದ್ಬಾಂಧವ' ಅಲೆಕ್ಸ್ ಕ್ಯಾರಿ ನೆರವಿಗೆ ನಿಂತರು. 43 ರನ್ ಗಳಿಸುವ ಮೂಲಕ, ತಮ್ಮ ತಂಡಕ್ಕೆ ಚೇತರಿಕೆ ನೀಡಿದ್ದರು.

ಆದರೆ, ಜಯದ ಆಸೆ ಅರಳಿಸಿದ್ದು ಮಿಚೇಲ್ ಸ್ಟಾರ್ಕ್. 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು ಅಜೇಯ ಅರ್ಧಶತಕ (58 ರನ್) ಬಾರಿಸಿದ ಅವರು, ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಆ ಮೂಲಕ ಎದುರಾಳಿಗೆ 280ಕ್ಕಿಂತ ಅಧಿಕ ಗುರಿ ನೀಡಲು ನೆರವಾಗಿದ್ದರು.

ಪಂದ್ಯದ ಮೊದಲ ಮೂರು ಇನಿಂಗ್ಸ್ಗಳಲ್ಲಿ ಒಮ್ಮೆಯೂ 250ಕ್ಕಿಂತ ಹೆಚ್ಚು ಮೊತ್ತ ದಾಖಲಾಗಿರಲಿಲ್ಲ. ಬೌಲರ್ಗಳೇ ಮೇಲುಗೈ ಸಾಧಿಸಿದ್ದರಿಂದ ಕಮಿನ್ಸ್ ಪಡೆ ಫೈನಲ್ ಜಯಿಸುವುದು ಖಚಿತ ಎನ್ನಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು ಮರ್ಕರಂ ಶತಕ ತಲೆಕೆಳಗಾಗಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.