ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಕಿವೀಸ್ ಅಭ್ಯಾಸ ಪಂದ್ಯ ಇಂದಿನಿಂದ

Last Updated 13 ಫೆಬ್ರುವರಿ 2020, 18:54 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಸೋಲು ಅನುಭವಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯಿಸಲು ಶುಕ್ರವಾರದಿಂದ ಸಿದ್ಧತೆ ಆರಂಭಿಸಲಿದೆ.

ನ್ಯೂಜಿಲೆಂಡ್ ‘ಎ’ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಫೆಬ್ರುವರಿ 21ರಿಂದ ಮೊದಲ ಟೆಸ್ಟ್‌ ಆರಂಭವಾಗಲಿದೆ. ಭಾರತ ತಂಡವು ಹೋದ ತಿಂಗಳು ಇಲ್ಲಿಗೆ ಬಂದಿದೆ. ಐದು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು ಗೆದ್ದಿದ್ದ ತಂಡವು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಗ್ಗರಿಸಿತ್ತು.

ಈ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಮತ್ತು ಶುಭಮನ್ ಗಿಲ್ ಅವರು ಕಣಕ್ಕಿಳಿಯಲಿದ್ದಾರೆ. ರೋಹಿತ್ ಶರ್ಮಾ ಗಾಯಗೊಂಡು ಹೊರಬಿದ್ದಿರುವ ಕಾರಣ ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಆದ್ದರಿಂದ ಇವರ ಮೇಲೆ ನಿರೀಕ್ಷೆಯ ಕಂಗಳು ನೆಟ್ಟಿವೆ.

ನ್ಯೂಜಿಲೆಂಡ್ ಇಲೆವನ್ ತಂಡದಲ್ಲಿ ಜೇಮ್ಸ್‌ ನಿಶಾಮ್, ಟಿಮ್ ಸೀಫರ್ಟ್‌ ಮತ್ತು ಈಶ್‌ ಸೋಧಿ ಪ್ರಮುಖರಾಗಿದ್ದಾರೆ. ಅವರು ಟೆಸ್ಟ್‌ನಲ್ಲಿ ಆಡಲಿರುವ ಆಟಗಾರರು.

ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಹನುಮವಿಹಾರಿ, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆರ್. ಅಶ್ವಿನ್, ರಿಷಭ್ ಪಂತ್, ನವದೀಪ್ ಸೈನಿ, ಶುಭಮನ್ ಗಿಲ್.

ನ್ಯೂಜಿಲೆಂಡ್ ಇಲೆವನ್: ಡೆರಿಲ್ ಮಿಚೆಲ್ (ನಾಯಕ), ಫಿನ್ ಅಲೆನ್, ಟಾಮ್ ಬ್ರೂಸ್, ಡೇನ್ ಕ್ಲೇವರ್, ಹೆನ್ರಿ ಕೂಪರ್, ಸ್ಕಾಟ್ ಕಗ್ಲೀಜಿನ್, ಜೇಮ್ಸ್‌ ನಿಶಾಮ್, ರಚಿನ್ ರವೀಂದ್ರ, ಟಿಮ್ ಸೀಫರ್ಟ್, ಈಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್, ಜೇಕ್ ಗಿಬ್ಸನ್, ಸ್ಕಾಟ್ ಜಾನ್ಸಟನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT