ಇಂದೋರ್: ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ.
ಮೊಹಾಲಿಯಲ್ಲಿ ಮೊದಲ ಪಂದ್ಯ ಗೆದ್ದ ಭಾರತ 1–0 ಮುನ್ನಡೆ ಪಡೆದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಹಾಗೇ ಜೈಸ್ವಾಲ್ ಕೂಡ ಸ್ಥಾನಪಡೆದಿದ್ದು ಗಿಲ್ ತಂಡದಿಂದ ಹೊರಗುಳಿದ್ದಾರೆ.
ಜೂನ್‌ನಲ್ಲಿ ನಡೆಯುವ ವಿಶ್ವಕಪ್‌ಗೆ ಮೊದಲು ಈ ಸರಣಿ ಬಿಟ್ಟರೆ, ಭಾರತ ತಂಡಕ್ಕೆ ಯಾವುದೇ ಟಿ20 ಸರಣಿ ಇಲ್ಲದ ಕಾರಣ ಈ ಸರಣಿಯು ಯುವ ಆಟಗಾರರ ಪಾಲಿಗೆ ಮಹತ್ವದ್ದು.