ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AFG: ಭಾರತ ವಿರುದ್ಧದ ಟಿ20 ಸರಣಿಗೆ ರಶೀದ್ ಖಾನ್ ಅಲಭ್ಯ

Published 10 ಜನವರಿ 2024, 10:13 IST
Last Updated 10 ಜನವರಿ 2024, 10:13 IST
ಅಕ್ಷರ ಗಾತ್ರ

ಮೊಹಾಲಿ: ಭಾರತ ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಲ್ಲಿ ಅಫ್ಗಾನಿಸ್ತಾನ ತಂಡಕ್ಕೆ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅನುಪಸ್ಥಿತಿ ಕಾಡಲಿದೆ.

ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಶೀದ್ ಖಾನ್ ಸಂಪೂರ್ಣವಾಗಿ ಚೇತರಿಸಿಲ್ಲ. ಹಾಗಾಗಿ ಈ ಟೂರ್ನಿಯಲ್ಲಿ ಅವರು ಆಡುವುದಿಲ್ಲ.

ಈ ಕುರಿತು ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಇಬ್ರಾಹಿಂ ಜದ್ರಾನ್ ಮಾಹಿತಿ ನೀಡಿದ್ದಾರೆ.

ರಶೀದ್ ಖಾನ್ ಸಂಪೂರ್ಣ ಫಿಟ್ ಆಗಿಲ್ಲ. ಅವರು ಪುನಶ್ಚೇತನ ಹಂತದಲ್ಲಿದ್ದಾರೆ. ಅವರ ಅಲಭ್ಯತೆ ತಂಡಕ್ಕೆ ಕಾಡಲಿದೆ. ಆದರೂ ಎಂತಹ ಪರಿಸ್ಥಿತಿಯನ್ನು ಎದುರಿಸಲು ತಂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮುಜೀಬ್ ಜದ್ರಾನ್‌ರಂತಹ ಆಟಗಾರರು ಹೆಚ್ಚು ಕ್ರಿಕೆಟ್ ಆಡಿದ್ದಾರೆ. ಅವರ ಮೇಲೆ ನಮಗೆ ನಂಬಿಕೆಯಿದೆ ಎಂದು ಅವರು ತಿಳಿಸಿದ್ದಾರೆ.

ಭಾರತ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಗಾನಿಸ್ತಾನ ಭಾಗವಹಿಸಲಿದೆ. ಮೊದಲ ಪಂದ್ಯ ನಾಳೆ (ಗುರುವಾರ) ಮೊಹಾಲಿಯಲ್ಲಿ ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಜನವರಿ 17ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ.

ವೇಳಾಪಟ್ಟಿ ಇಂತಿದೆ:

ಮೊದಲ ಟಿ20: ಜ.11, ಮೊಹಾಲಿ

ಎರಡನೇ ಟಿ20: ಜ.14, ಇಂದೋರ್

ಅಂತಿಮ ಟಿ20: ಜ. 17, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT