ಭಾನುವಾರ, ಜನವರಿ 19, 2020
22 °C
IND vs AUS

ತಲೆಗೆ ಪೆಟ್ಟು | ತಂಡದೊಂದಿಗೆ ಪಂತ್ ರಾಜ್‌ಕೋಟ್‌ಗೆ ಹೊರಡುವುದಿಲ್ಲ: ಬಿಸಿಸಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ಭಾರತ–ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಪೆಟ್ಟು ತಿಂದಿದ್ದ ವಿಕೆಟ್‌ಕೀಪರ್‌ ರಿಷಭ್‌ ಪಂತ್‌, ತಂಡದ ಉಳಿದ ಆಟಗಾರರೊಂದಿಗೆ ರಾಜ್‌ಕೋಟ್‌ಗೆ ತೆರಳುವುದಿಲ್ಲ ಎಂದು ತಿಳಿದು ಬಂದಿದೆ.

‘ರಿಷಭ್‌ ಪಂತ್‌ ಸಹ ಆಟಗಾರರೊಂದಿಗೆ ಇಂದು ರಾಜ್‌ಕೋಟ್‌ಗೆ ತೆರಳುವುದಿಲ್ಲ. ನಿಧಾನವಾಗಿ ಅವರು ತಂಡ ಕೂಡಿಕೊಳ್ಳಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ತಜ್ಞ ವೈದ್ಯರು ರಿಷಭ್ ಅವರ ತಪಾಸಣೆ ಮಾಡಿದ್ದಾರೆ. ಬುಧವಾರ ಬೆಳಿಗ್ಗೆಯವರೆಗೂ ಅವರ ಮೇಲೆ ವೈದ್ಯರು ವಿಶೇಷ ನಿಗಾ ಇಟ್ಟಿದ್ದು, ಆರೈಕೆ ಮಾಡುತ್ತಿದ್ದಾರೆ’ ಎಂದು ಪಂದ್ಯದ ಬಳಿಕ ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿತ್ತು.

ಎರಡನೇ ಪಂದ್ಯಕ್ಕೆ ಪಂತ್ ಲಭ್ಯವಾಗಿರಲಿದ್ದಾರೆಯೇ ಅಥವಾ ವಿಶ್ರಾಂತಿ ನೀಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

44ನೇ ಓವರ್‌ ಬೌಲ್‌ ಮಾಡಿದ ಪ್ಯಾಟ್ ಕಮಿನ್ಸ್‌ ಎಸೆತವೊಂದು ನಿರೀಕ್ಷೆಗಿಂತ ಹೆಚ್ಚು ಎತ್ತರ ಪುಟಿದು ಪಂತ್‌ ಹೆಲ್ಮೆಟ್‌ಗೆ ಬಡಿದಿತ್ತು. ಇದರಿಂದಾಗಿ ಅವರಿಗೆ ಬ್ಯಾಟಿಂಗ್‌ ಬಳಿಕ ವಿಶ್ರಾಂತಿ ನೀಡಲಾಯಿತು. ಪಂತ್‌ ಬದಲು ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಬದಲೀ ಫೀಲ್ಡರ್‌ ಆಗಿ ಮನೀಷ್‌ ಪಾಂಡೆ ಆಡಿದ್ದರು.

ಈ ಪಂದ್ಯದಲ್ಲಿ ತಾಳ್ಮೆಯಿಂದ ಆಡಿದ್ದ ಪಂತ್ 33 ಎಸೆತಗಳಲ್ಲಿ 28 ರನ್ ಗಳಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು