ಸೋಮವಾರ, ಫೆಬ್ರವರಿ 24, 2020
19 °C

IND vs BAN Pink Test: ಐತಿಹಾಸಿಕ ಪಂದ್ಯದಲ್ಲಿ ಕೊಹ್ಲಿ ಶತಕ: ಬಾಂಗ್ಲಕ್ಕೆ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಐತಿಹಾಸಿಕ ಟೆಸ್ಟ್‌ನಲ್ಲಿ ಮಧ್ಯಮ ವೇಗಿಗಳಿಗೆ ನೆರವು ನೀಡುತ್ತಿರುವ ಪಿಂಕ್‌ ಚೆಂಡನ್ನು ದಿಟ್ಟವಾಗಿ ಎದುರಿಸಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 27ನೇ ಶತಕ ಸಿಡಿಸಿ ಸಂಭ್ರಮಿಸಿದರು.

164ಎಸೆತಗಳನ್ನು ಎದುರಿಸಿರುವ ಕೊಹ್ಲಿ, 12 ಬೌಂಡರಿ ಸಹಿತ 104 ರನ್‌ ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಪ್ರವಾಸಿ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಅವರು ಎರಡು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು. ಮೊದಲ ದಿನದಾಟದಲ್ಲಿ ಚೇತೇಶ್ವರ ಪೂಜಾರ(55) ಜೊತೆ 94ರನ್‌ ಸೇರಿಸಿದ್ದ ಅವರು, ಉಪನಾಯಕ ಅಜಿಂಕ್ಯ ರಹಾನೆ(51) ಜೊತೆಗೆ ನಾಲ್ಕನೇ ವಿಕೆಟ್‌ಗೆ 199ರನ್‌ ಸೇರಿಸಿದರು.

ಸದ್ಯ ಭಾರತ, 70 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 260 ರನ್‌ ಕಲೆ ಹಾಕಿದ್ದು, 154ರನ್‌ ಮುನ್ನಡೆ ಸಾಧಿಸಿದೆ. ಕೊಹ್ಲಿ ಜೊತೆ ರವೀಂದ್ರ ಜಡೇಜಾ(9) ಕ್ರೀಸ್‌ನಲ್ಲಿದ್ದಾರೆ.

ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ ಕೇವಲ 106 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತ್ತು. ಕೊಹ್ಲಿ ಪಡೆಯ ತ್ರಿವಳಿ ವೇಗಿಗಳಾದ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಹಾಗೂ ಮೊಹಮದ್‌ ಶಮಿ ಪ್ರವಾಸಿ ಬಳಗದ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿದ್ದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ 30.3 ಓವರ್‌ಗಳಲ್ಲಿ 106ಕ್ಕೆ ಆಲೌಟ್‌

ಶಾದಮನ್‌ ಇಸ್ಲಾಂ 29
ಲಿಟನ್‌ ದಾಸ್‌(ಗಾಯಗೊಂಡು ನಿವೃತ್ತಿ 24)

ಇಶಾಂತ್‌ ಶರ್ಮಾ 5 ವಿಕೆಟ್‌
ಉಮೇಶ್‌ ಯಾದವ್‌ 3 ವಿಕೆಟ್‌
ಮೊಹಮದ್‌ ಶಮಿ 2 ವಿಕೆಟ್‌

ಭಾರತ 70 ಓವರ್‌ಗಳಲ್ಲಿ 260ಕ್ಕೆ 4
ವಿರಾಟ್‌ ಕೊಹ್ಲಿ 104 ಅಜೇಯ
ಅಜಿಂಕ್ಯ ರಹಾನೆ 51
ಚೇತೇಶ್ವರ ಪೂಜಾರ 55

ಇಬಾದತ್‌ ಹೊಸೈನ್‌ 2 ವಿಕೆಟ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು