ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs BAN Test: ಮೊದಲ ಪಂದ್ಯದಲ್ಲಿ ಆಡಲಿರುವ ಉಭಯ ತಂಡಗಳ ಆಟಗಾರರು ಇವರು...

Published : 18 ಸೆಪ್ಟೆಂಬರ್ 2024, 4:22 IST
Last Updated : 18 ಸೆಪ್ಟೆಂಬರ್ 2024, 4:22 IST
ಫಾಲೋ ಮಾಡಿ
Comments

ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುಕ್ರವಾರ (ಸೆ.19) ಆರಂಭವಾಗಲಿದೆ. ಈ ಟೆಸ್ಟ್‌ ಪಂದ್ಯ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

5 ದಿನ ನಡೆಯುವ ಟೆಸ್ಟ್‌ ಪಂದ್ಯದಲ್ಲಿ ದಿನಕ್ಕೆ ಮೂರು ಸೆಷನ್​ಗಳಲ್ಲಿ 90 ಓವರ್​ಗಳ ಆಟ ಆಡಿಸಲಾಗುತ್ತದೆ. ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ಟೆಸ್ಟ್‌ ಪಂದ್ಯ ನಡೆಯುತ್ತದೆ.

ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್​​ನಲ್ಲಿ ಕೇವಲ 13 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಭಾರತ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಬಾಂಗ್ಲಾದೇಶ ತಂಡ ಒಮ್ಮೆಯೂ ಭಾರತದ ವಿರುದ್ಧ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದಾಗ್ಯೂ 2 ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಎರಡು ತಂಡಗಳು 16 ಜನ ಆಟಗಾರರು ಇರುವ ಟೆಸ್ಟ್‌ ತಂಡವನ್ನು ಘೋಷಣೆ ಮಾಡಿವೆ. ಅಂತಿಮವಾಗಿ ಉಭಯ ತಂಡಗಳಿಂದ 16 ಜನರು ಕಣಕ್ಕೆ ಇಳಿಯಲಿದ್ದಾರೆ.

ಎರಡು ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ...

ಭಾರತ ತಂಡ....

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಧ್ರುವ ಜುರೇಲ್ (ಇಬ್ಬರೂ ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್‌ ಬೂಮ್ರಾ, ಯಶ್ ದಯಾಳ್.

ಬಾಂಗ್ಲಾದೇಶ ತಂಡ...

ನಜ್ಮುಲ್ ಹೊಸೇನ್ ಶಾಂತೊ (ನಾಯಕ), ಲಿಟನ್ ದಾಸ್ (ವಿಕೆಟ್‌ಕೀಪರ್) ಮುಷ್ಫಿಕುರ್ ರಹೀಮ್, ಹಸನ್ ಮೆಹಮೂದ್, ಶಕೀಬ್ ಅಲ್ ಹಸನ್, ಮೆಹದಿ ಹಸನ್ ಮಿರಾಜ್, ಮಹ್ಮುದುಲ್ ಹಸನ್ ಜಾಯ್, ಜಾಕಿರ್ ಹಸನ್, ಶದ್ಮನ್ ಇಸ್ಲಾಂ, ಮೊಮಿನುಲ್ ಹಕ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹೀದ್ ರಾಣಾ, ಟಸ್ಕಿನ್ ಅಹ್ಮದ್, ಸೈಯದ್ ಖಾಲಿದ್ ಅಹ್ಮದ್, ಜಾಕರ್ ಅಲಿ ಅನಿಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT