ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ವಿರಾಟ್ 11ನೇ ಬಾರಿಗೆ ಡಕ್ ಔಟ್; ಟ್ರೋಲ್‌ಗೆ ಗುರಿ

Last Updated 13 ಫೆಬ್ರುವರಿ 2021, 10:58 IST
ಅಕ್ಷರ ಗಾತ್ರ

ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು.

ಈ ನಡುವೆ ಔಟ್ ಆದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೀಡಿರುವ ರಿಯಾಕ್ಷನ್ ನೆಟ್ಟಿಗರ ಪಾಲಿಗೆ ಆಹಾರವಾಗಿದ್ದು, ಟ್ರೋಲ್‌ಗೆ ಗುರಿಪಡಿಸಲಾಗಿದೆ.

ಟಾಸ್ ಗೆದ್ದ ಭಾರತವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಈ ನಡುವೆ ಭೋಜನ ವಿರಾಮಕ್ಕೂ ಮುನ್ನವೇ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಕ್ರೀಸಿಗೆ ಆಗಮಿಸಿದ್ದರು.

ಆದರೆ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ ದಾಳಿಯಲ್ಲಿ ಕೇವಲ ಮೂರು ಎಸೆತಗಳಲ್ಲೇ ಖಾತೆ ತೆರೆಯಲಾಗದೇ ಕ್ಲೀನ್ ಬೌಲ್ಡ್ ಆದರು.



ಕೊಹ್ಲಿ ಪಾಲಿಗೆ ನಿಜಕ್ಕೂ ಆಘಾತ ಕಾದಿತ್ತು.ಬೇಲ್ಸ್ ಹಾರಿರುವುದು ಅರಿವಿಗೆ ಬಂದಿರಲಿಲ್ಲ. ಇದೇ ಕಾರಣಕ್ಕಾಗಿ ಕ್ರೀಸಿನಿಂದ ಕದಲಲಿಲ್ಲ. ಅಂತಿಮವಾಗಿ ಥರ್ಡ್ ಅಂಪೈರ್ ರಿಪ್ಲೇ ಪರಿಶೀಲಿಸಿದಾಗ ಔಟ್ ಎಂಬುದು ಸ್ಪಷ್ಟವಾಗಿತ್ತು. ಬಳಿಕ ಕ್ರೀಸ್ ಬಿಟ್ಟು ತಲೆ ತಗ್ಗಿಸುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಬಾರಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರು. ಹಾಗೆಯೇ ನಾಯಕನಾಗಿ ಏಳನೇ ಬಾರಿಗೆ ಡಕ್ ಔಟ್ ಆಗಿದ್ದಾರೆ.

ಅಂದ ಹಾಗೆ ಭಾರತದ ಪರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಅತಿ ಹೆಚ್ಚು ಬಾರಿ ಎಂಟು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಇಂಗ್ಲೆಂಡ್‌ನ ಬಾರ್ಮಿ ಆರ್ಮಿ (ಇಂಗ್ಲೆಂಡ್ ತಂಡದ ಅಭಿಮಾನಿಗಳ ಬಳಗ) ಕೂಡಾ ತನ್ನ ಅಧಿಕೃತ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡಿದೆ. ಚಹಾ ತಯಾರಿಸಲು ಅಡುಗೆ ಕೋಣೆಗೆ ತೆರಳಿದಾಗ ಫ್ರಿಡ್ಜ್‌ನಲ್ಲಿ ಹಾಲಿಲ್ಲ ಎಂದು ಅರಿವಾದ ಕ್ಷಣ ಎಂದು ಲೇವಡಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT