ಭಾನುವಾರ, ಏಪ್ರಿಲ್ 11, 2021
32 °C

IND vs ENG: ಭಾರತದಲ್ಲೇ ಎಲ್ಲ 7 ಶತಕ ಬಾರಿಸಿ ದಾಖಲೆ ಬರೆದ ರೋಹಿತ್ ಶರ್ಮಾ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಭಾರತ ಕ್ರಿಕೆಟ್ ತಂಡದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ರೋಹಿತ್, ಟೆಸ್ಟ್ ವೃತ್ತಿ ಜೀವನದಲ್ಲಿ ಏಳನೇ ಶತಕ ಸಾಧನೆ ಮಾಡಿದ್ದಾರೆ.

ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ರೋಹಿತ್ ಶರ್ಮಾ ಅಮೋಘ ಶತಕ ಬಾರಿಸಿದರು.

ಇದರೊಂದಿಗೆ ರೋಹಿತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಎಲ್ಲ ಏಳು ಶತಕಗಳನ್ನು ತವರಿನಲ್ಲೇ ದಾಖಲಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ಶರ್ಮಾ ಆಕರ್ಷಕ ಶತಕ ಬಾರಿಸುವುದರೊಂದಿಗೆ ತಮ್ಮ ವಿರುದ್ಧ ಎದುರಾದ ಎಲ್ಲ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು.

ಇದನ್ನೂ ಓದಿ: 

ಈ ಹಿಂದೆ ಭಾರತದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್, ಮೊದಲ ಆರು ಶತಕಗಳನ್ನು ಭಾರತದಲ್ಲೇ ದಾಖಲಿಸಿದ್ದರು. ಈ ದಾಖಲೆಯನ್ನೀಗ ಹಿಟ್‌ಮ್ಯಾನ್ ಮುರಿದಿದ್ದಾರೆ.

ಇನ್ನು ಒಟ್ಟಾರೆ ದಾಖಲೆ ಪರಿಗಣಿಸಿದಾಗ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಬಾಂಗ್ಲಾದೇಶದ ಮೊಮಿನುಲ್ ಹಕ್ ತವರಿನಲ್ಲಿ ಮೊದಲ 10 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ ತಾಯ್ನಾಡಿನ ಮೈದಾನದಲ್ಲೇ ಮೊದಲ ಐದು ಶತಕಗಳನ್ನು ಗಳಿಸಿದ್ದಾರೆ.

ಅಂದ ಹಾಗೆ 2019ರಲ್ಲಿ ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ಕೊನೆಯದಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದರು. ಈಗ ಶತಕದ ಬರವನ್ನು ನೀಗಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು