ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಆ್ಯಂಡರ್ಸನ್ ಮಿಂಚಿನ ದಾಳಿ, ಸಂಕಷ್ಟದಲ್ಲಿ ಭಾರತ 56/4

Last Updated 25 ಆಗಸ್ಟ್ 2021, 12:51 IST
ಅಕ್ಷರ ಗಾತ್ರ

ಲೀಡ್ಸ್: ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತ ಹಿನ್ನೆಡೆಗೊಳಗಾಗಿದೆ. ಇಂಗ್ಲೆಂಡ್ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮಿಂಚಿನ ದಾಳಿಗೆ ತತ್ತರಿಸಿರುವ ಟೀಮ್ ಇಂಡಿಯಾ, ಭೋಜನ ವಿರಾಮದ ಹೊತ್ತಿಗೆ 25.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ ಸಂಕಷ್ಟದಲ್ಲಿದೆ.

ಕಳೆದ ಪಂದ್ಯದ ಶತಕವೀರ ಕೆ.ಎಲ್. ರಾಹುಲ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. ಇವರನ್ನು ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಆ್ಯಂಡರ್ಸನ್ ಹೊರದಬ್ಬಿದರು.

ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಚೇತೇಶ್ವರ್ ಪೂಜಾರ (1) ಹಾಗೂ ನಾಯಕ ವಿರಾಟ್ ಕೊಹ್ಲಿ (7) ಅವರಿಗೂ ಆ್ಯಂಡರ್ಸನ್ ಪೆವಿಲಿಯನ್ ಹಾದಿ ತೋರಿಸಿದರು. ಈ ಎಲ್ಲ ಮೂರು ಕ್ಯಾಚ್‌ಗಳು ವಿಕೆಟ್ ಕೀಪರ್ ಜೋಸ್ ಬಟ್ಲರ್ ಪಾಲಾಯಿತು.

21 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಆದರೆ ಭೋಜನ ವಿರಾಮಕ್ಕೂ ಮುನ್ನ 18 ರನ್ ಗಳಿಸಿದ್ದ ರಹಾನೆರನ್ನು ಒಲಿ ರಾಬಿನ್ಸನ್ ಹೊರದಬ್ಬುವದರೊಂದಿಗೆ ಭಾರತದ ನಾಲ್ಕನೇ ವಿಕೆಟ್ ಪತನವಾಯಿತು.

ಈಗ 15 ರನ್ ಗಳಿಸಿ ಕ್ರೀಸಿನಲ್ಲಿರುವ ರೋಹಿತ್ ತಂಡಕ್ಕೆ ಆಸರೆಯಾಗಿದ್ದಾರೆ. ಇಂಗ್ಲೆಂಡ್ ಪರ ಆ್ಯಂಡರ್ಸನ್ ಮೂರು ಮತ್ತು ರಾಬಿನ್ಸನ್ ಒಂದು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT