ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಜೋ ರೂಟ್ ಅಮೋಘ ಶತಕ, ಭಾರತೀಯ ಬೌಲರ್‌ಗಳ ಪರದಾಟ

Last Updated 26 ಆಗಸ್ಟ್ 2021, 16:23 IST
ಅಕ್ಷರ ಗಾತ್ರ

ಲೀಡ್ಸ್‌: ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ನಾಯಕ ಜೋ ರೂಟ್ ಅಮೋಘ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ ಎರಡನೇ ದಿನದಾಟದಲ್ಲಿಇಂಗ್ಲೆಂಡ್ ತಂಡವು ಬೃಹತ್ ಮುನ್ನಡೆ ಗಳಿಸುವಲ್ಲಿ ನೆರವಾಗಿದ್ದಾರೆ.

ಭಾರತದ 78 ರನ್‌ಗಳಿಗೆ ಉತ್ತರವಾಗಿ ಆಂಗ್ಲರ ಪಡೆ ದಿಟ್ಟ ಪ್ರತ್ಯುತ್ತರವನ್ನೇ ನೀಡಿದೆ. ಆರಂಭಿಕರಾದ ರೋರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಮೊದಲ ವಿಕೆಟ್‌ಗೆ 135 ರನ್‌ಗಳ ಜೊತೆಯಾಟ ನೀಡಿದರು. ಬರ್ನ್ಸ್ 61 ಹಾಗೂ ಹಮೀದ್ 68 ರನ್ ಗಳಿಸಿದರು.

ಬಳಿಕ ಕ್ರೀಸಿಗಿಳಿದ ಡೇವಿಡ್ ಮಲನ್ ಸಹ ಆಕರ್ಷಕ ಅರ್ಧಶತಕ (70) ಸಾಧನೆ ಮಾಡಿದರು. ಅಲ್ಲದೆ ನಾಯಕ ಜೋ ರೂಟ್ ಅವರೊಂದಿಗೆ 139 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅತ್ತ ನಾಯಕನ ಇನ್ನಿಂಗ್ಸ್ ಕಟ್ಟಿದ ರೂಟ್ ಸರಣಿಯಲ್ಲಿ ಮೂರನೇ ಶತಕ ಸಾಧನೆ ಮಾಡಿದರು. ಅಲ್ಲದೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕಗಳನ್ನು (39) ಬಾರಿಸಿದ ಹಿರಿಮೆಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ನಾಯಕ ಆಲಿಸ್ಟಾರ್ ಕುಕ್ (38) ದಾಖಲೆಯನ್ನು ಮುರಿದಿದ್ದಾರೆ.

ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 23 ಹಾಗೂ ಏಕದಿನದಲ್ಲಿ 19 ಶತಕಗಳನ್ನು ಹೊಂದಿದ್ದಾರೆ. ಹಾಗೆಯೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ 12ನೇ ಶತಕ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲೂ ಕುಕ್ ದಾಖಲೆಯನ್ನು ಸರಿಗಟ್ಟಿದ್ದಾರೆ.

2021ನೇ ಸಾಲಿನಲ್ಲಿ ರೂಟ್ ಬ್ಯಾಟ್‌ನಿಂದ ಸಿಡಿದ ಆರನೇ ಶತಕ ಇದಾಗಿದೆ. ಇಂಗ್ಲೆಂಡ್ ಪರ 1947ರಲ್ಲಿ ಡೆನಿಸ್ ಕಾಂಪ್ಟನ್ ಹಾಗೂ 2002ರಲ್ಲಿ ಮೈಕಲ್ ವಾನ್ ಈ ಸಾಧನೆ ಮಾಡಿದ್ದರು.

ಒಟ್ಟಾರೆಯಾಗಿ ಭಾರತ ವಿರುದ್ಧ ಎಂಟನೇ ಶತಕ ಗಳಿಸಿದ್ದಾರೆ. ಈ ಮೂಲಕ ಗ್ಯಾರಿ ಸೋಬರ್ಸ್, ವಿವ್ ರಿಚರ್ಡ್ಸ್, ರಿಕಿ ಪಾಂಟಿಂಗ್ ಹಾಗೂ ಸ್ಟೀವ್ ಸ್ಮಿತ್ ಸಾಲಿಗೆ ಸೇರಿದ್ದಾರೆ.

ತಾಜಾ ವರದಿಯ ವೇಳೆಗೆ ಇಂಗ್ಲೆಂಡ್ ಐದು ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದು, 282 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT