ಮಂಗಳವಾರ, ಆಗಸ್ಟ್ 9, 2022
23 °C

IND vs ENG: ಬೆಸ್ಟೊ ಕೆಣಕಿದ ಕೊಹ್ಲಿ; ಭಾರಿ ಬೆಲೆ ತೆತ್ತ ಭಾರತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಎಜ್‌ಬಾಸ್ಟನ್: ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯವು ಪ್ರತಿ ಬಾರಿಯೂ ರೋಚಕತೆಯಿಂದ ಕೂಡಿರುತ್ತದೆ.

ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲೂ ಇತ್ತಂಡಗಳ ಆಟಗಾರರ ನಡುವಣ ಬಿಸಿ ಬಿಸಿ ವಾತಾವರಣಕ್ಕೆ ಸಾಕ್ಷಿಯಾಯಿತು.

ಇದನ್ನೂ ಓದಿ: 

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಸುಮ್ಮನೇ ಕೈಕಟ್ಟಿ ಕೂರುವುದಿಲ್ಲ. ಎದುರಾಳಿ ಬ್ಯಾಟರ್ ಜಾನಿ ಬೆಸ್ಟೊ ಅವರನ್ನು ಮಾತಿನಿಂದ ಕಿಚಾಯಿಸಿದರು.

 

 

 

ಮೂರನೇ ದಿನದಾಟದಲ್ಲಿ ಕೊಹ್ಲಿ ಹಾಗೂ ಬೆಸ್ಟೊ ನಡುವೆ ಬಿಸಿ ಬಿಸಿ ಮಾತುಗಳು ವಿನಿಮಯವಾದವು. ಜಸ್‌ಪ್ರೀತ್ ಬೂಮ್ರಾ ಅವರ 33ನೇ ಓವರ್‌ನಲ್ಲಿ ಬೆಸ್ಟೊ ಅವರನ್ನು ದಿಟ್ಟಿಸಿ ನೋಡಿದ ಕೊಹ್ಲಿ, 'ಶಟ್ ಅಪ್, ಅಲ್ಲಿ ನಿಂತು ಬ್ಯಾಟ್ ಮಾಡು' ಎಂದು ಕಿಚಾಯಿಸಿದರು. ಈ ನಡುವೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಮಧ್ಯ ಪ್ರವೇಶವಾಯಿತು.

 

ಬೂಮ್ರಾ ಓವರ್‌ ಬಳಿಕ ಖುದ್ದಾಗಿ ಕೊಹ್ಲಿಯೇ ಸಂಧಾನಕ್ಕೆ ಮುಂದಾದರು. ಬೆಸ್ಟೊ ಹೆಗಲ ಮೇಲೆ ಕೈ ಹಾಕಿ ನಗುತ್ತಲೇ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಆದರೆ ವಾತಾವರಣ ಇಲ್ಲಿಗೆ ತಣ್ಣಗಾಗಲಿಲ್ಲ. ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡಿದ ಬೆಸ್ಟೊ, ಅಮೋಘ ಶತಕ ಬಾರಿಸಿ ಭಾರತ ತಂಡವನ್ನು ಸತಾಯಿಸಿದರು.

ಬೆಸ್ಟೊ ಶತಕದ ಅಬ್ಬರದಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್ ಗಳಿಸಲು ಸಾಧ್ಯವಾಯಿತು. ಇದರಿಂದಾಗಿ ಭಾರತದ ಮುನ್ನಡೆ 132 ರನ್‌ಗಳಿಗೆ ಸೀಮಿತಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416 ರನ್ ಪೇರಿಸಿತ್ತು.

 

 

 

 

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು