ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: 100ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ದ್ವಿಶತಕ ಸಾಧನೆ

Last Updated 6 ಫೆಬ್ರುವರಿ 2021, 9:04 IST
ಅಕ್ಷರ ಗಾತ್ರ

ಚೆನ್ನೈ: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 100ನೇ ಪಂದ್ಯದಲ್ಲಿ ಅಮೋಘ ದ್ವಿಶತಕ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ದ್ವಿಶತಕ ಬಾರಿಸಿದ್ದಾರೆ.

ಭಾರತ ವಿರುದ್ಧ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಜೋ ರೂಟ್ ವಿಶಿಷ್ಟ ಮೈಲುಗಲ್ಲನ್ನು ತಲುಪಿದರು.

ಭಾರತ ನೆಲದಲ್ಲೇ ಪದಾರ್ಪಣೆ ಮಾಡಿರುವ ಜೋ ರೂಟ್ ಈಗ ಭಾರತದಲ್ಲೇ ತಮ್ಮ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಬರೆದಿದ್ದಾರೆ.

ಇದನ್ನೂ ಓದಿ:

ಈ ಮೂಲಕ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನವಾದರು.

ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಜೋ ರೂಟ್, ನಿರಂತಕವಾಗಿ ಬ್ಯಾಟ್ ಬೀಸಿದರು. ಮೊದಲ ದಿನದಾಟದಲ್ಲೇ ಶತಕ ಸಾಧನೆ ಮಾಡಿರುವ ರೂಟ್, ಮತ್ತದೇ ಅಮೋಘ ಲಯವನ್ನು ಮುಂದುವರಿಸಿದರು.

ಸಿಕ್ಸರ್ ಮೂಲಕ ಡಬಲ್ ಸೆಂಚುರಿ...
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಳಿಯಲ್ಲಿ ಸಿಕ್ಸರ್ ಬಾರಿಸುವ ಮೂಲಕ ಜೋ ರೂಟ್ ದ್ವಿಶತಕವನ್ನು ಬಾರಿಸಿದರು. ಈ ಮೂಲಕ ಸಿಕ್ಸರ್ ಮೂಲಕ ದ್ವಿಶತಕ ತಲುಪಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಎಂದೆನಿಸಿದರು.

ಅಷ್ಟೇ ಯಾಕೆ ಇದು ರೂಟ್ ಬ್ಯಾಟ್‌ನಿಂದ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಸಿಡಿದ ಎರಡನೇ ದ್ವಿಶತಕ ಸಾಧನೆಯಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಡಬಲ್ ಸೆಂಚುರಿ ಬಾರಿಸಿದ್ದರು.

ಈ ಮೊದಲು 98,99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT