ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್-ಕೊಹ್ಲಿ-ಗಿಲ್: ಟೀಮ್ ಇಂಡಿಯಾದ ಮೂರು ಪೀಳಿಗೆಯ ವಿಕೆಟ್ ಗಳಿಸಿದ ಆ್ಯಂಡರ್ಸನ್

ಅಕ್ಷರ ಗಾತ್ರ

ಎಜ್‌ಬಾಸ್ಟನ್: ಟೀಮ್ ಇಂಡಿಯಾದ ಮೂರು ಪೀಳಿಗೆಯ ಬ್ಯಾಟರ್‌ಗಳನ್ನು ಔಟ್ ಮಾಡಿದ ಖ್ಯಾತಿಗೆ ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಪಾತ್ರರಾಗಿದ್ದಾರೆ.

ಆ್ಯಂಡರ್ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಒಂಬತ್ತು ಬಾರಿ, ವಿರಾಟ್ ಕೊಹ್ಲಿ ಅವರನ್ನು ಏಳು ಸಲ ಮತ್ತು ಶುಭಮನ್ ಗಿಲ್ ಅವರನ್ನು ಮೂರು ಬಾರಿ ಔಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ 1973, ವಿರಾಟ್ ಕೊಹ್ಲಿ 1988 ಹಾಗೂ ಶುಭಮನ್ ಗಿಲ್ 1999ನೇ ಇಸವಿಯಲ್ಲಿ ಹುಟ್ಟಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ಗೆ ಸಚಿನ್ 1989ರಲ್ಲಿ, ವಿರಾಟ್ ಕೊಹ್ಲಿ 2011 ಹಾಗೂ ಶುಭಮನ್ ಗಿಲ್ 2020ರಲ್ಲಿ ಪದಾರ್ಪಣೆ ಮಾಡಿದ್ದರು.

ಈ ಮೂಲಕ ಆ್ಯಂಡರ್ಸನ್ ಭಾರತದ ಮೂರು ಪೀಳಿಗೆಯ ಆಟಗಾರರನ್ನು ಔಟ್ ಮಾಡಿದ ಸಾಧನೆ ಮಾಡಿದ್ದಾರೆ.

2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಆ್ಯಂಡರ್ಸನ್, 39ರ ಹರೆಯದಲ್ಲೂ ತಮ್ಮ ನಿಖರ ದಾಳಿಯ ಮೂಲಕ ಮೋಡಿ ಮಾಡಿದ್ದಾರೆ.

ಎಜ್‌ಬಾಸ್ಟನ್‌ ಮೈದಾನದಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಆ್ಯಂಡರ್ಸನ್ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಆ್ಯಂಡರ್ಸನ್ ಅವರ 32ನೇ ಐದು ವಿಕೆಟ್ ಸಾಧನೆಯಾಗಿದೆ. ಈ ಪೈಕಿ ಭಾರತದ ವಿರುದ್ಧ ಆರನೇ ಬಾರಿಗೆ ಐದರ ಗೊಂಚಲು ಪಡೆದಿದ್ದಾರೆ. ಇದರೊಂದಿಗೆ ವೇಗಿಗಳ ಪೈಕಿ ಇಯಾನ್ ಬಾಥಂ, ಇಮ್ರಾನ್ ಖಾನ್ ಹಾಗೂ ಮಾಲ್ಕಮ್ ಮಾರ್ಷಲ್ ಜೊತೆಗೆ ಜಂಟಿ ಅಗ್ರಸ್ಥಾನ ಹಂಚಿದ್ದಾರೆ.

ಸ್ಪಿನ್ನರ್‌ಗಳಾದ ಮುತ್ತಯ್ಯ ಮುರಳೀಧರನ್ ಹಾಗೂ ನಥನ್ ಲಿಯಾನ್ ಭಾರತದ ವಿರುದ್ಧ ತಲಾ ಏಳು ಬಾರಿ ಇನ್ನಿಂಗ್ಸ್‌ವೊಂದರಲ್ಲಿ ಐದಕ್ಕೂ ಹೆಚ್ಚು ವಿಕೆಟ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದಬೌಲರ್‌ಗಳ ಪಟ್ಟಿಯಲ್ಲಿಜೇಮ್ಸ್ ಆ್ಯಂಡರ್ಸನ್ (656) ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT