ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಣ ಶನಿವಾರ ಇಲ್ಲಿಯ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ ಕಣಕ್ಕಿಳಿಯುವರೇ ಎಂಬ ಕುತೂಹಲ ಗರಿಗೆದರಿದೆ.

ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಶಮಿ ಕಣಕ್ಕಿಳಿದಿರಲಿಲ್ಲ. ಗಾಯ ಮತ್ತು ಶಸ್ತ್ರಚಿಕಿತ್ಸೆಯಿಂದಾಗಿ ದೀರ್ಘಕಾಲದವರೆಗೆ ಅವರು ಕ್ರಿಕೆಟ್ನಿಂದ ದೂರವಿದ್ದರು. ಈಚೆಗೆ ರಣಜಿ ಟ್ರೋಫಿ ಟೂರ್ನಿಯ ಮೂಲಕ ಅವರು ಕ್ರಿಕೆಟ್ಗೆ ಮರಳಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ತಮ್ಮ ಸಾಮರ್ಥ್ಯ ತೋರಲು ಸಿದ್ಧವಾಗಿದ್ದಾರೆ. ಬಹುಶಃ ಚೆಪಾಕ್ ಕ್ರೀಡಾಂಗಣದಲ್ಲಿ ಅವರಿಗೆ ಅವಕಾಶ ಸಿಗಬಹುದು.

ಕೋಲ್ಕತ್ತ ಪಂದ್ಯದಲ್ಲಿ ಶಮಿ ಅವರು ಆಡದಿದ್ದರೂ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು ಹೊಸಚೆಂಡಿನಲ್ಲಿ ಸಮರ್ಥವಾಗಿ ಹೊಣೆ ನಿಭಾಯಿಸಿದ್ದರು. ಮಧ್ಯ ಹಂತದ ಓವರ್ಗಳಲ್ಲಿ ಸ್ಪಿನ್ನರ್ ವರುಣ ಚಕ್ರವರ್ತಿ ತಮ್ಮ ಮ್ಯಾಜಿಕ್ ತೋರಿಸಿದ್ದರು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಅಬ್ಬರಿಸಿದ್ದರು. ಅದರಿಂದಾಗಿ ಭಾರತ ತಂಡವು ಜಯಿಸಿತ್ತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತ್ತು.

ಇಲ್ಲಿಯ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆಗಳಿವೆ. ಮೊದಲಿನಿಂದಲೂ ಇದೇ ಗುಣವೂ ಇಲ್ಲಿಯ ಅಂಗಣಕ್ಕೆ ಇದೆ. ಇದರಿಂದಾಗಿ ವರುಣ್ ಜೊತೆಗೆ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಅವರಿಗೂ ತಮ್ಮ ಕೈಚಳಕ ಮೆರೆಯುವ ಅವಕಾಶ ದೊರೆಯಬಹುದು.

ಇಂಗ್ಲೆಂಡ್ ತಂಡದ ಸ್ಪಿನ್ನರ್ ಆದಿಲ್ ರಶೀದ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರು ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಪಂದ್ಯವು ಮತ್ತಷ್ಟು ರೋಚಕವಾಗಬಹುದು. ಕಳೆದ ಪಂದ್ಯದಲ್ಲಿ ವೇಗಿ ಜೋಫ್ರಾ ಆರ್ಚರ್ ಅವರೊಬ್ಬರೇ ಯಶಸ್ವಿಯಾಗಿದ್ದರು.

ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಂದ ಇಂಗ್ಲೆಂಡ್ಗೆ ಹೆಚ್ಚಿನ ಆತಂಕವಿದೆ. ಕೋಲ್ಕತ್ತದಲ್ಲಿ 230ಕ್ಕಿಂತ ಹೆಚ್ಚಿನ ಸ್ಟ್ರೈಕ್ರೇಟ್ನಲ್ಲಿ ಶರ್ಮಾ ರನ್ ಗಳಿಸಿದ್ದರು. ಸಂಜು ಅವರು ಕಳೆದ ಆರು ಇನಿಂಗ್ಸ್ಗಳಲ್ಲಿ 3 ಶತಕ ಗಳಿಸಿ ಉತ್ತಮ ಲಯದಲ್ಲಿದ್ದಾರೆ. ಈ ಎಡಗೈ –ಬಲಗೈ ಬ್ಯಾಟಿಂಗ್ ಜೋಡಿಯು ತಂಡಕ್ಕೆ ಉತ್ತಮ ಆರಂಭ ನೀಡಿ ದೊಡ್ಡ ಮೊತ್ತ ಪೇರಿಸಲು ಅಡಿಪಾಯ ಹಾಕುವ ಸಾಮರ್ಥ್ಯ ಹೊಂದಿದೆ.

ಅವರನ್ನು ಬಿಟ್ಟರೆ ತಿಲಕ್ ವರ್ಮಾ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ ಅವರೂ ಕೊನೆಯ ಹಂತದ ಓವರ್ಗಳಲ್ಲಿ ರನ್ ಸೂರೆ ಮಾಡುವ ಸಮರ್ಥರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಲಯಕ್ಕೆ ಮರಳಬೇಕಿದೆ. ಕಳೆದ ಪಂದ್ಯದಲ್ಲಿ ಅವರು ವೈಫಲ್ಯ ಅನುಭವಿಸಿದ್ದರು. ಅವರೂ ತಮ್ಮ ನೈಜ ಬೀಸಾಟಕ್ಕೆ ಕುದುರಿಕೊಂಡರೆ ಇಂಗ್ಲೆಂಡ್ ತಲೆನೋವು ಹೆಚ್ಚುವುದು ಖಚಿತ.

ಪ್ರವಾಸಿ ಬಳಗದಲ್ಲಿ ನಾಯಕ ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಫಿಲ್ ಸಾಲ್ಟ್ ಮತ್ತು ಜೇಮಿ ಸ್ಮಿತ್ ಅವರ ಮುಂದೆ ಭಾರತದ ಬೌಲಿಂಗ್ ಪಡೆಯನ್ನು ಎದುರಿಸಿ ನಿಲ್ಲುವ ಸವಾಲು ಇದೆ.

ಪಂದ್ಯ ಆರಂಭ : ರಾತ್ರಿ 7ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.