ಶನಿವಾರ, ಏಪ್ರಿಲ್ 1, 2023
29 °C
19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್: ಭಾರತ–ಇಂಗ್ಲೆಂಡ್ ಫೈನಲ್ ಇಂದು

IND vs ENG U19 Women's World Cup Final| ಚಾರಿತ್ರಿಕ ಸಾಧನೆಯತ್ತ ಶಫಾಲಿ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊಷೆಫ್‌ಸ್ಟ್ರೂಮ್‌: ಶನಿವಾರ ತಮ್ಮ ಜನ್ಮದಿನ ಆಚರಿಸಿಕೊಂಡ ಶಫಾಲಿ ವರ್ಮಾ ಇದೇ ಮೊದಲ ಸಲ ಆಯೋಜಿಸಲಾಗಿರುವ  19 ವರ್ಷದೊಳಗಿನ ಮಹಿಳೆಯರ  ವಿಶ್ವಕಪ್ ಜಯದ ಹೊಸ್ತಿಲಲ್ಲಿದ್ದಾರೆ.

ಭಾನುವಾರ ಇಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಶಫಾಲಿ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 

ಭಾರತದ ಸೀನಿಯರ್ ಮಹಿಳಾ ತಂಡವು ಇದುವರೆಗೂ ಯಾವುದೇ ಮಾದರಿಯಲ್ಲಿಯೂ ವಿಶ್ವಕಪ್ ಜಯಿಸಿಲ್ಲ.  ಹೋದ ವರ್ಷ ವಿಶ್ವಕಪ್ ಫೈನಲ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ್ದ ಮಹಿಳಾ ತಂಡದಲ್ಲಿ ಶಫಾಲಿ ಕೂಡ ಆಡಿದ್ದರು. 

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಯುವಪಡೆಯ ನಾಯಕತ್ವದ  19 ವರ್ಷದ ಶಫಾಲಿಗೆ ಈಗ ಇತಿಹಾಸ ರಚಿಸುವ ಅವಕಾಶ ಒದಗಿಬಂದಿದೆ. 

‘ವಿಶ್ವಕಪ್ ಫೈನಲ್‌ ಗಳಲ್ಲಿ ಆಡಿದ ಅನುಭವ ನನಗಿದೆ. ಪ್ರಶಸ್ತಿ ಸುತ್ತು ಎಂಬ ಒತ್ತಡಕ್ಕೆ ಒಳಗಾಗಬೇಡಿ ಎಂದು ನನ್ನ ಸಹ ಆಟಗಾರ್ತಿಯರಿಗೆ ಹೇಳಿರುವೆ. ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿ ಆಡಬೇಕೆಂದು ಸಲಹೆ ಕೊಟ್ಟಿದ್ದೇನೆ’ ಎಂದು ಶಫಾಲಿ ಹೇಳಿದರು. 

ತಂಡದ ಶ್ವೇತಾ ಶೆಹ್ರಾವತ್, ರಿಚಾ ಘೋಷ್ ಮತ್ತು ಪಾರ್ಶ್ವಿ ಚೋಪ್ರಾ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ತಂಡವು ಕೂಡ ಎಲ್ಲ ವಿಭಾಗಗಳಲ್ಲಿ ಉತ್ತಮ ಲಯದಲ್ಲಿದ್ದು ಉಭಯ ತಂಡಗಳ ಪೈಪೋಟಿಯು ರೋಚಕವಾಗುವ ನಿರೀಕ್ಷೆ ಇದೆ.

ತಂಡಗಳು: ಭಾರತ: ಶಫಾಲಿ ವರ್ಮಾ (ನಾಯಕಿ), ಶ್ವೇತಾ ಶೆಹ್ರಾವತ್, ಗೊಂಗಡಿ ತ್ರಿಷಾ, ಸೌಮ್ಯಾ ತಿವಾರಿ, ಸೋನಿಯಾ ಮೆಹದಿಯಾ, ರಿಚಾ ಘೋಷ್, ಹೃಷಿತಾ ಬಸು, ತಿತಾಸ್ ಸಾಧು, ಮನ್ನತ್ ಕಶ್ಯಪ್, ಪಾರ್ಶ್ವಿ ಚೋಪ್ರಾ, ಸೋನಮ್ ಯಾದವ್, ಶಬನಮ್, ಫಲಕ್ ನಾಝ್, ಯಶಶ್ರೀ ಸೊಪ್ಪದಹಂಡಿ.

ಇಂಗ್ಲೆಂಡ್: ಗ್ರೇಸ್ ಸ್ಕ್ರೀವೆನ್ಸ್, ಎಲೀ ಆ್ಯಂಡರ್ಸನ್, ಹನ್ನಾ ಬೇಕರ್ಸ್, ಜೊಸೀ ಗ್ರೋವ್ಸ್, ಲಿಬರ್ಟಿ ಹೀಪ್, ನಿಯಮಾ ಹಾಲೆಂಡ್, ರೈನಾ ಮೆಕ್‌ಡೊನಾಲ್ಡ್, ಗೇ, ಎಮಾ ಮಾರ್ಲೋವ್, ಏರಿಸ್ ಪಾವ್ಲೆ, ದೇವರಿಯಾ ಪೆರಿನ್, ಲಿಝಿ ಸ್ಕಾಟ್, ಸೆರೆನ್ ಸ್ಮಾಲಿ, ಸೋಫಿಯಾ ಸ್ಮಾಲಿ, ಅಲೆಕ್ಸಾ ಸ್ಟೋನ್‌ಹೌಸ್, ಮ್ಯಾಡೀ ವಾರ್ಡ್.

ಪಂದ್ಯ ಆರಂಭ: ಸಂಜೆ 5.15 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು