ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಾಯಕನಾಗಿ ಡಬಲ್ ಸೆಂಚುರಿ; ಧೋನಿ ಸಾಲಿಗೆ ಕಿಂಗ್ ಕೊಹ್ಲಿ

Last Updated 29 ಮಾರ್ಚ್ 2021, 5:24 IST
ಅಕ್ಷರ ಗಾತ್ರ

ಪುಣೆ:200 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ಕಪ್ತಾನರಾಗಿ ಪ್ರತಿನಿಧಿಸಿದ ಹಿರಿಮೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

ಈ ಮೂಲಕ ಮಾಜಿ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆಗೆ ಎಲೀಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಅಲ್ಲದೆ ಮಾಜಿ ನಾಯಕರುಗಳಾದ ಎಂ.ಎಸ್. ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಬಳಿಕ ಈ ಸಾಧನೆ ಮಾಡಿದ ಭಾರತದ ಮೂರನೇ ಕಪ್ತಾನ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾನುವಾರ ಪುಣೆಯಲ್ಲಿ ನಡೆದ ಪಂದ್ಯವು ವಿರಾಟ್ ಪಾಲಿಗೆ ಸ್ಮರಣೀಯವೆನಿಸಿತ್ತು. ಏಳು ರನ್ ಅಂತರದ ರೋಚಕ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಮೂರು ಪಂದ್ಯಗಳ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು.

2014ರಲ್ಲಿ ಧೋನಿ ಅವರಿಂದ ಟೆಸ್ಟ್ ನಾಯಕತ್ವ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ವಹಿಸಿದ್ದರು. ಬಳಿಕ 2017ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ನಾಯಕರಾಗಿ ನೇಮಕಗೊಂಡಿದ್ದರು.

ಕೊಹ್ಲಿ ನಾಯಕರಾಗಿ ಭಾರತ ತಂಡವನ್ನು 60 ಟೆಸ್ಟ್, 45 ಟಿ20 ಮತ್ತು 95 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ದಾಖಲೆ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಲ್ಲಿದೆ. ಧೋನಿ ದಾಖಲೆಯ 332 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು.

ಭಾರತದ ಪರ ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿರುವ ನಾಯಕರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ 221 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವ ಅಂಕಿಅಂಶ:
ಟೆಸ್ಟ್: ಪಂದ್ಯ - 60, ಗೆಲುವು - 36, ಸೋಲು - 14, ಫಲಿತಾಂಶವಿಲ್ಲ- 10
ಏಕದಿನ: ಪಂದ್ಯ - 95, ಗೆಲುವು - 65, ಸೋಲು - 27, ಟೈ - 1, ಫಲಿತಾಂಶವಿಲ್ಲ- 2
ಟಿ20: ಪಂದ್ಯ - 45, ಗೆಲುವು - 27, ಸೋಲು - 14, ಟೈ - 2, ಫಲಿತಾಂಶವಿಲ್ಲ- 2


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT