ಶುಕ್ರವಾರ, ಏಪ್ರಿಲ್ 23, 2021
28 °C

IND vs ENG: ಧೋನಿ ದಾಖಲೆ ಮುರಿದ ಕಿಂಗ್ ಕೊಹ್ಲಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ತವರು ನೆಲದಲ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಭಾಜನವಾಗಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಪುಟ ಸೇರಿದರು.

ಈ ಸರಣಿಗೂ ಮುನ್ನ ಧೋನಿ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಎರಡು ಗೆಲುವುಗಳ ಅಗತ್ಯವಿತ್ತು. ಚೆನ್ನೈನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ಜಯ ದಾಖಲಿಸುವುದರೊಂದಿಗೆ ಮಹಿ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದರು. ಈಗ ಅಹಮದಾಬಾದ್‌ನಲ್ಲೂ ಗೆಲುವಿನ ನಗೆ ಬೀರುವುದರೊಂದಿಗೆ ಧೋನಿ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: 

ತವರು ನೆಲದಲ್ಲಿ ಭಾರತ ತಂಡವನ್ನು 29 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿರುವ ವಿರಾಟ್ ಕೊಹ್ಲಿ ದಾಖಲೆಯ 22 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಉಳಿದಿರುವ ಐದು ಪಂದ್ಯಗಳಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.

 

 

 

ಈ ಮೂಲಕ ಅತಿ ಹೆಚ್ಚು ಶೇಕಡಾ 75.8ರಷ್ಟು ಗೆಲುವನ್ನು ಕಾಪಾಡಿಕೊಂಡಿದ್ದಾರೆ. ಇನ್ನೊಂದೆಡೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ಮುನ್ನಡೆಸಿದ 30 ಪಂದ್ಯಗಳಲ್ಲಿ ಭಾರತವು 21ರಲ್ಲಿ ಗೆಲುವು ದಾಖಲಿಸಿತ್ತು.

 

ಮಾಜಿ ನಾಯಕರುಗಳಾದ ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ ಹಾಗೂ ಸುನಿಲ್ ಗವಾಸ್ಕರ್ ಅನುಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: 

ತವರು ನೆಲದಲ್ಲಿ ಭಾರತದ ಅತಿ ಯಶಸ್ವಿ ಟೆಸ್ಟ್ ನಾಯಕರುಗಳ ಪಟ್ಟಿ ಇಂತಿದೆ:
ವಿರಾಟ್ ಕೊಹ್ಲಿ: ಪಂದ್ಯ- 29*, ಗೆಲುವು- 22, ಸೋಲು-2, ಡ್ರಾ-5
ಮಹೇಂದ್ರ ಸಿಂಗ್ ಧೋನಿ: ಪಂದ್ಯ- 30, ಗೆಲುವು- 21, ಸೋಲು-3, ಡ್ರಾ-3
ಮೊಹಮ್ಮದ್ ಅಜರುದ್ದೀನ್: ಪಂದ್ಯ- 20, ಗೆಲುವು- 13, ಸೋಲು-4, ಡ್ರಾ-3
ಸೌರವ್ ಗಂಗೂಲಿ: ಪಂದ್ಯ- 21, ಗೆಲುವು- 10, ಸೋಲು-3, ಡ್ರಾ-8
ಸುನಿಲ್ ಗವಾಸ್ಕರ್: ಪಂದ್ಯ- 29, ಗೆಲುವು- 7, ಸೋಲು-2, ಡ್ರಾ-20

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು