ವೆಲ್ಲಿಂಗ್ಟನ್:ಮೊದಲ ಇನಿಂಗ್ಸ್ನಲ್ಲಿ ಕೇವಲ 165 ರನ್ಗಳಿಗೆ ಆಲೌಟ್ ಆದ ಭಾರತ ತಂಡದೆದುರು ಆತಿಥೇಯ ನ್ಯೂಜಿಲೆಂಡ್ಮೊದಲ ಪಂದ್ಯದಲ್ಲಿಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ,ಮೊದಲ ದಿನದಾಟದಂತ್ಯಕ್ಕೆ55 ಓವರ್ಗಳಲ್ಲಿ 5 ವಿಕೆಟ್ಗಳಿಗೆ 122 ರನ್ ಗಳಿಸಿತ್ತು. ಆದರೆ, ಎರಡನೇ ದಿನ ಆ ಮೊತ್ತಕ್ಕೆ ಕೇವಲ 43 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ ಕಳೆದುಕೊಂಡಿತು.

ಇದನ್ನೂ ಓದಿ:ಮೊದಲ ಇನಿಂಗ್ಸ್ | 5ನೇ ಸಲ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕೊಹ್ಲಿ ಪಡೆ

ಈ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದಕಿವೀಸ್, ಎರಡನೇ ದಿನದಾಟದಂತ್ಯಕ್ಕೆ 71.1 ಓವರ್ಗಳಲ್ಲಿಐದು ವಿಕೆಟ್ ಕಳೆದುಕೊಂಡು 216 ರನ್ ಗಳಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ಅನುಭವಿ ರಾಸ್ ಟೇಲರ್ ಆತಿಥೇಯ ಬಳಗದ ಬ್ಯಾಟಿಂಗ್ಗೆ ಬಲ ತುಂಬಿದರು.

153 ಎಸೆತಗಳಲ್ಲಿ 89 ರನ್ ಗಳಿಸಿಶತಕದತ್ತ ಸಾಗಿದ್ದ ವಿಲಿಯಮ್ಸ್ನ್ ತಮ್ಮ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವ ಸೂಚನೆ ನೀಡಿದ್ದರು. ಆದರೆ, ಅವರನ್ನುಮೊಹಮದ್ ಶಮಿ ಪೆವಿಲಿಯನ್ಗೆ ಅಟ್ಟುವ ಮೂಲಕ ಭಾರತದ ಪಾಳಯದಲ್ಲಿ ಸಮಾಧಾನ ಮೂಡಿಸಿದರು. 44 ರನ್ ಗಳಿಸಿದ್ದ ಟೇಲರ್ ಇಶಾಂತ್ಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ:ಕಿವೀಸ್ ವಿರುದ್ಧದ ಟೆಸ್ಟ್: ಪರದಾಡಿದ ವಿರಾಟ್ ಕೊಹ್ಲಿ ಬಳಗ

ಸದ್ಯ ಆತಿಥೇಯರು51 ರನ್ಗಳ ಮುನ್ನಡೆ ಸಾಧಿಸಿದ್ದು, 14 ರನ್ ಗಳಿಸಿರುವ ಹೆನ್ರಿ ನಿಕೋಲಸ್ ಮತ್ತು 4 ರನ್ ಹೊಡೆದಿರುವ ಕಾಲಿನ್ ಡಿ ಗ್ರಾಂಡ್ ಹೋಮ್ ಕ್ರೀಸ್ನಲ್ಲಿದ್ದಾರೆ.

ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಮೊಹಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.