ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NZ vs IND ಏಕದಿನ–ಟೆಸ್ಟ್ ಸರಣಿ: ಗಾಯಾಳು ರೋಹಿತ್ ಬದಲು ಮಯಂಕ್‌ಗೆ ಅವಕಾಶ ಸಾಧ್ಯತೆ

Last Updated 3 ಫೆಬ್ರುವರಿ 2020, 13:13 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ಒಳಗಾಗಿದ್ದು,ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಅವರು (ರೋಹಿತ್‌) ನ್ಯೂಜಿಲೆಂಡ್‌ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಗಂಭೀರ ಗಾಯವಾಗಿದೆಯೇ ಎಂಬುದು ನಂತರ ಗೊತ್ತಾಗಲಿದೆ.ಆದರೆ, ರೋಹಿತ್‌ ಉಳಿದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ’ ಎಂದುಹೆಸರು ಹೇಳಲು ಬಯಸದಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಅಮೋಘ ಪ್ರದರ್ಶನದೊಂದಿಗೆಟೆಸ್ಟ್‌ ಕ್ರಿಕೆಟ್‌ಗೆ ವಾಪಸ್‌ ಆಗಿದ್ದ ರೋಹಿತ್‌ ಶರ್ಮಾ,ಆರಂಭಿಕನಾಗಿ ವಿದೇಶದಲ್ಲಿ ಆಡಲಿರುವ ಮೊದಲ ಸರಣಿ ಇದಾಗಲಿತ್ತು.ನ್ಯೂಜಿಲೆಂಡ್‌ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಮತ್ತು ಐದು ಪಂದ್ಯಗಳ ಟೆಸ್ಟ್‌ ಸರಣಿ ಬುಧವಾರದಿಂದ ಆರಂಭವಾಗಲಿದೆ.

ನ್ಯೂಜಿಲೆಂಡ್‌ ಪ್ರವಾಸದ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೋಹಿತ್,‘ವೈಯಕ್ತಿಕವಾಗಿ ಇದು ನನಗೆ ಸವಾಲಿನ ಸರಣಿಯಾಗಲಿದೆ. ಯಾವುದೇ ಸಂದರ್ಭದಲ್ಲಿ ಹೊಸ ಚೆಂಡಿನ ದಾಳಿಯನ್ನು ಎದುರಿಸುವುದು ಸುಲಭವಲ್ಲ. ಅದರಲ್ಲೂ ವಿದೇಶದಲ್ಲಿ ಆಡುವಾಗ ಖಂಡಿತಾ ಇದು ಸವಾಲಿನದ್ದಾಗಲಿದೆ’ ಎಂದಿದ್ದರು.

ಭಾನುವಾರ ಮುಕ್ತಾಯವಾದ ಟಿ20 ಸರಣಿಯ ಕೊನೆಯ ಪಂದ್ಯದಿಂದ ನಾಯಕ ವಿರಾಟ್‌ ಕೊಹ್ಲಿ ಹೊರಗುಳಿದಿದ್ದರು. ಹೀಗಾಗಿ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತ ರೋಹಿತ್‌, ಬ್ಯಾಟಿಂಗ್‌ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಿವೃತ್ತಿ ಪಡೆದು ಮೈದಾನದಿಂದ ಹೊರನಡೆದಿದ್ದ ಅವರು,ಬಳಿಕ ಮೈದಾನಕ್ಕಿಳಿದಿರಲಿಲ್ಲ.ರೋಹಿತ್ಬದಲು ಕನ್ನಡಿಗ ಕೆ.ಎಲ್‌.ರಾಹುಲ್‌ ತಂಡ ಮುನ್ನಡೆಸಿದ್ದರು.

ಆಪಂದ್ಯವನ್ನು ಕೇವಲ 7 ರನ್‌ ಗಳಿಂದ ಗೆದ್ದುಕೊಂಡ ಭಾರತ,ನ್ಯೂಜಿಲೆಂಡ್‌ನಲ್ಲಿಸರಣಿ ಗೆದ್ದ ಸಾಧನೆ ಮಾಡಿತು. ಮಾತ್ರವಲ್ಲದೆ ಚುಟುಕು ಕ್ರಿಕೆಟ್‌ನಲ್ಲಿ5 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನೂ ಬರೆಯಿತು.

ಮಯಂಕ್‌ಗೆ ಅವಕಾಶ!
ಕಳೆದ ವರ್ಷ ತವರಿನಲ್ಲಿ ನಡೆದ ವೆಸ್ಟ್‌ ಇಂಡೀಸ್‌ ಸರಣಿಗೆ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅಲಭ್ಯರಾಗಿದ್ದರು. ಈ ವೇಳೆ ಮಯಂಕ್‌ ಅಗರವಾಲ್‌ ಅವರನ್ನು ತಂಡಕ್ಕೆ ಬರಮಾಡಿಕೊಳ್ಳಲಾಗಿತ್ತು. ಇದೀಗ ರೋಹಿತ್‌ ಮತ್ತು ಧವನ್‌ ಇಬ್ಬರೂ ಅಲಭ್ಯರಾಗಿರುವುದರಿಂದ ಮಯಂಕ್‌ಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT