ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20WC: ಭಾರತ- ಪಾಕಿಸ್ತಾನ ನಡುವೆ ನಿಕಟ ಹಣಾಹಣಿ: ಮ್ಯಾಥ್ಯೂ ಹೇಡನ್

Last Updated 21 ಅಕ್ಟೋಬರ್ 2021, 12:36 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ನಿಕಟ ಹಣಾಹಣಿ ನಡೆಯಲಿದ್ದು, ಯಾವ ತಂಡವು ಪಂದ್ಯದಿಂದ ಪಲಾಯನ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಸಲಹೆಗಾರ ಕೂಡ ಆಗಿರುವ ಹೇಡನ್, ಯಾವುದೂ ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಣ ಹಣಾಹಣಿಗೆ ಸರಿಸಾಟಿಯಲ್ಲ ಎಂದು ಹೇಳಿದ್ದಾರೆ.

'ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ ತಪ್ಪು ಮಾಡುವ ಅಂಶಗಳು ಅತಿ ಕಡಿಮೆಯಾಗಿದೆ. ಹಾಗಾಗಿ ನಾಯಕತ್ವವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಾಬರ್ ಆಜಂ ಅದನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಬ್ಯಾಟಿಂಗ್‌ನಲ್ಲೂ ಪ್ರೀಮಿಯಂ ಆಟಗಾರರಾಗಿದ್ದಾರೆ' ಎಂದು ಹೇಳಿದರು.

'ಪ್ರತಿಯೊಂದು ತಂಡವು ಬಾಬರ್ ಆಜಂ ಅವರನ್ನು ಗುರಿಯಾಗಿಸಲಿದೆ. ಹಾಗಾಗಿ ಓರ್ವ ಬ್ಯಾಟರ್ ಹಾಗೂ ನಾಯಕರಾಗಿ ಅವರ ಮೇಲೆ ಒತ್ತಡವಿದೆ. ಆದರೆ ಅವೆಲ್ಲವನ್ನೂ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ' ಎಂದು ಹೇಳಿದರು.

'ಆಟದ ವಿವಿಧ ಅಂಶಗಳನ್ನು ಪರಿಗಣಿಸಿದಾಗಯಾವುದೂ ಕೂಡಾ ಭಾರತ ಹಾಗೂ ಪಾಕಿಸ್ತಾನದ ಹಣಾಹಣಿಗೆ ಹೊಂದಿಕೆಯಾಗುವುದಿಲ್ಲ. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಆಡುವಾಗ ಸೃಷ್ಟಿಯಾಗುವುದಕ್ಕೆ ಸಮಾನವಾದ ಒತ್ತಡ ಸೃಷ್ಟಿಯಾಗುತ್ತದೆ' ಎಂದು ಹೇಳಿದರು.

'ನಾವು ಅನುಮತಿಸಿದರೆ ಮಾತ್ರ ಒತ್ತಡ ಸೃಷ್ಟಿಯಾಗುತ್ತದೆ. ನೀವು ಉತ್ತಮ ಸಿದ್ಧತೆ ನಡೆಸಿದ್ದು, ಅನುಭವವನ್ನು ಸಂಪಾದಿಸಿದ್ದೀರಿ. ಈಗ ಇತಿಹಾಸ ನಿರ್ಮಿಸುವ ಅವಕಾಶ ಮುಂದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT