ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL 2nd ODI: ಸಾಧಾರಣ ಮೊತ್ತಕ್ಕೆ ಆಲೌಟ್ ಆದ ಶ್ರೀಲಂಕಾ

Last Updated 12 ಜನವರಿ 2023, 11:42 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ತಂಡದ ವಿರುದ್ಧ ಇಲ್ಲಿನ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 215 ರನ್‌ ಗಳಿಸಿ ಆಲೌಟ್‌ ಆಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭಿಕ ಬ್ಯಾಟರ್‌ ಅವಿಷ್ಕ ಫರ್ನಾಂಡೊ (20), ಪದಾರ್ಪಣೆ ಪಂದ್ಯವಾಡಿದ ನುವನಿದು ಫರ್ನಾಂಡೊ (50) ಹಾಗೂ ಮೂರನೇ ಕ್ರಮಾಂಕದ ಬ್ಯಾಟರ್‌ ಕುಶಾಲ್ ಮೆಂಡಿಸ್‌ (34) ಉತ್ತಮ ಆರಂಭ ಒದಗಿಸಿದರು. ಹೀಗಾಗಿ ಲಂಕಾ ತಂಡ 16 ಓವರ್‌ಗಳ ಅಂತ್ಯಕ್ಕೆ ಕೇವಲ 1 ವಿಕೆಟ್‌ ಕಳೆದುಕೊಂಡು 99 ರನ್ ಗಳಿಸಿ ಉತ್ತಮ ಮೊತ್ತದತ್ತ ಮುನ್ನಡೆದಿತ್ತು.

ಆದರೆ, 17ನೇ ಓವರ್‌ನಲ್ಲಿ ದಾಳಿಗಿಳಿದ 'ಚೈನಾಮನ್‌' ಕುಲದೀಪ್‌ ಯಾದವ್‌, ಮೆಂಡಿಸ್‌ ವಿಕೆಟ್‌ ಉರುಳಿಸಿ ಲಂಕಾ ಓಟಕ್ಕೆ ಬ್ರೇಕ್ ಹಾಕಿದರು. ನಂತರದ ಓವರ್‌ನಲ್ಲಿ ಅಕ್ಷರ್ ಪಟೇಲ್‌ ಮತ್ತೊಂದು ವಿಕೆಟ್‌ ಕಬಳಿಸಿದರು. ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸಿ ಚೆನ್ನಾಗಿ ಆಡುತ್ತಿದ್ದ ನುವನಿದು 22ನೇ ಓವರ್‌ ವೇಳೆ ರನೌಟ್‌ ಆದರು. ಬಳಿಕ ಬಂದ ಚರಿತ ಅಸಲಂಕ ಹಾಗೂ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ದಾಸುನ್‌ ಶನಕ (2) ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಲಂಕಾ ಪಡೆಯ ಮಧ್ಯಮ ಕ್ರಮಾಂಕ ದಿಢೀರ್ ಕುಸಿಯಿತು.

ಕೊನೆಯಲ್ಲಿ ವನಿಂದು ಹಸರಂಗ (21), ದುನಿತ್‌ ವೆಲ್ಲಲಗೆ (32), ಚಮಿಕಾ ಕರುಣಾರತ್ನೆ (17) ಮತ್ತು ಕುಶಾಲ್‌ ರಜಿತಾ (ಅಜೇಯ 17) ಹೋರಾಟ ನಡೆಸಿ ತಂಡದ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದರು. ಅಂತಿಮವಾಗಿ ಪ್ರವಾಸಿ ತಂಡದ ಆಟ 39.4 ಓವರ್‌ಗಳಲ್ಲೇ ಕೊನೆಗೊಂಡಿತು.

ಭಾರತ ಪರ ಮೊಹಮ್ಮದ್‌ ಸಿರಾಜ್‌ ಹಾಗೂ ಕುಲದೀಪ್‌ ಯಾದವ್‌ ತಲಾ ಮೂರು ವಿಕೆಟ್ ಪಡೆದರೆ, ಉಮ್ರಾನ್‌ ಮಲಿಕ್‌ ಎರಡು ಹಾಗೂ ಅಕ್ಷರ್‌ ಪಟೇಲ್ ಒಂದು ವಿಕೆಟ್ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT