ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ZIM: ಸಿಕಂದರ್ ರಝಾ ಶತಕದ ಹೋರಾಟ ವ್ಯರ್ಥ; ಭಾರತ ಕ್ಲೀನ್‌ಸ್ವೀಪ್ ಸಾಧನೆ

Last Updated 23 ಆಗಸ್ಟ್ 2022, 7:12 IST
ಅಕ್ಷರ ಗಾತ್ರ

ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧನೆಗೈದಿದೆ.

ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಸೋಮವಾರ ನಡೆದ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್ ಚೊಚ್ಚಲ ಶತಕದ (130) ಬಲದೊಂದಿಗೆ ಭಾರತ ತಂಡವು 13 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇದರೊಂದಿಗೆ ಜಿಂಬಾಬ್ವೆಯ ಬ್ಯಾಟರ್ ಸಿಕಂದರ್ ರಝಾ ಅವರ ಶತಕದ (115) ಹೋರಾಟ ವ್ಯರ್ಥವೆನಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಜಿಂಬಾಬ್ವೆ 49.3 ಓವರ್‌ಗಳಲ್ಲಿ 276 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲೆರಡು ಪಂದ್ಯಗಳಲ್ಲಿ ಸುಲಭ ತುತ್ತಾಗಿದ್ದ ಜಿಂಬಾಬ್ವೆ, ಅಂತಿಮ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡುವ ಮೂಲಕ ಗಮನ ಸೆಳೆಯಿತು.

ಇದನ್ನೂ ಓದಿ:

ರಝಾ 95 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮೂರು ಸಿಕ್ಸರ್ ನೆರವಿನಿಂದ 115 ರನ್ ಗಳಿಸಿ ಅಬ್ಬರಿಸಿದರು. ಆದರೆ 49ನೇ ಓವರ್‌ನಲ್ಲಿ ಔಟ್ ಆಗುವುದರೊಂದಿಗೆ ಜಿಂಬಾಬ್ವೆ ಹೋರಾಟಕ್ಕೆ ಹಿನ್ನಡೆಯಾಯಿತು.

ಸೀನ್ ವಿಲಿಮ್ಸ್ 45 ಹಾಗೂ ಬ್ರಾಡ್ ಇವಾನ್ಸ್ 28 ರನ್ ಗಳಿಸಿ ಗಮನ ಸೆಳೆದರು.

ಭಾರತದ ಪರ ಆವೇಶ್ ಖಾನ್ ಮೂರು ಮತ್ತು ದೀಪಕ್ ಚಾಹರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.

ಈ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ ಶುಭಮನ್ ಗಿಲ್, 97 ಎಸೆತಗಳಲ್ಲಿ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಇಶಾನ್ ಕಿಶನ್ ಅರ್ಧಶತಕ (50 ರನ್, 61 ಎಸೆತ, 6 ಬೌಂಡರಿ) ಗಳಿಸಿ ಮಿಂಚಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಐದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT