ಗೋಲ್ಡ್ ಕೋಸ್ಟ್(ಆಸ್ಟ್ರೇಲಿಯಾ): ಭಾರತ ಮಹಿಳಾ ಕ್ರಿಕೆಟ್ ತಂಡದಆಟಗಾರ್ತಿ ಪೂನಂ ರಾವತ್,ಅಂಪೈರ್ ಔಟ್ ನೀಡದಿದ್ದರೂ ತಾವು ಔಟಾಗಿರುವುದನ್ನು ಅರಿತು ಪೆವಿಲಿಯನ್‌ನತ್ತ ಹೆಜ್ಜೆಹಾಕುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಆತಿಥೇಯ ಆಸ್ಟ್ರೇಲಿಯಾ ಹಾಗೂ ಭಾರತ ಮಹಿಳಾ ತಂಡಗಳು ಏಕೈಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಗಳಿಸಿದ ಅಮೋಘ ಶತಕದ ಬಲದಿಂದ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಸದ್ಯ ಮಳೆಯಿಂದಾಗಿ ದಿನದಾಟಕ್ಕೆ ಅಡ್ಡಿಯಾಗಿದ್ದು,ಮಿಥಾಲಿ ರಾಜ್ ಪಡೆ ಮೊದಲ ಇನಿಂಗ್ಸ್‌ನಲ್ಲಿ 5ವಿಕೆಟ್ ಕಳೆದುಕೊಂಡು276 ರನ್ ಗಳಿಸಿದೆ.
ಮಳೆಯ ಕಾರಣದಿಂದಾಗಿ ಮೊದಲ ದಿನವೂ ಕೇವಲ44.1 ಓವರ್‌ಗಳ ಆಟವಷ್ಟೇ ನಡೆದಿತ್ತು.
ಕ್ರೀಡಾಸ್ಫೂರ್ತಿ ಮೆರೆದ ರಾವತ್
ಮೊದಲ ದಿನದಾಟದ ಅಂತ್ಯಕ್ಕೆ 16 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಪೂನಂ, ಎರಡನೇ ದಿನ ಮಂದಾನ ಜೊತೆ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಶತಕದ (102 ರನ್) ಜೊತೆಯಾಟವಾಡಿದ್ದು ಭಾರತಕ್ಕೆ ನೆರವಾಯಿತು. ಇನಿಂಗ್ಸ್‌ನ 69ನೇ ಓವರ್‌ನಲ್ಲಿಮಂದಾನ ಔಟಾದರೆ,81ನೇ ಓವರ್‌ನಲ್ಲಿ ಪೂನಂ ಪೆವಿಲಿಯನ್‌ನತ್ತ ವಾಪಸ್ ಆದರು.
ಸೋಫಿ ಮಾಲಿನೆಕ್ಸ್‌ಹಾಕಿದ ಈ (81ನೇ) ಓವರ್‌ನ 4ನೇ ಎಸೆತವನ್ನು ಪೂನಂ ರಕ್ಷಣಾತ್ಮಕವಾಗಿ ಆಡಿದರಾದರೂ, ಚೆಂಡು ಬ್ಯಾಟ್‌ನ ಅಂಚು ಸವರಿಕೊಂಡುವಿಕೆಟ್‌ಕೀಪರ್ ಅಲ್ಯಸ್ಸಾ ಹೀಲಿ ಕೈಸೇರಿತು.
ಈ ವೇಳೆಸೋಫಿ ಹಾಗೂ ಸಹ ಆಟಗಾರ್ತಿಯರು ಔಟ್‌ಗಾಗಿ ಮನವಿ ಮಾಡಿದರು. ಅಂಪೈರ್ ಔಟ್ ನೀಡಲಿಲ್ಲ. ಆದರೆ, ತಾವು ಔಟಾಗಿರುವುದನ್ನು ಅರಿತಭಾರತದ ಆಟಗಾರ್ತಿಕ್ರೀಸ್‌ನಿಂದ ಹೊರನಡೆದರು.ಪೂನಂ ನಡೆ ಕಂಡುಅಂಪೈರ್ ಮತ್ತು ಆಸಿಸ್ ಆಟಗಾರ್ತಿಯರು ಅಚ್ಚರಿಗೊಂಡರು.
ಈ ವಿಡಿಯೊ ಇದೀಗ ವೈರಲ್ ಆಗಿದ್ದು, ಕ್ರಿಕೆಟ್‌ಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಪೂನಂಗೆ ಐಸಿಸಿಯ ಕ್ರೀಡಾಸ್ಫೂರ್ತಿ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು, ಪೂನಂ ಔಟ್ ಆಗಿರುವುದನ್ನು ಒಪ್ಪಿಕೊಂಡದ್ದು ಉತ್ತಮ ನಡೆಯಾಗಿದೆ. ಆದರೂ, ಅಂಪೈರ್ ತೀರ್ಮಾನವನ್ನು ಒಪ್ಪಿಕೊಂಡು ಕ್ರೀಸ್‌ನಲ್ಲೇ ಉಳಿಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಔಟಾಗುವ ಮುನ್ನಬರೋಬ್ಬರಿ165 ಎಸೆತಗಳನ್ನು ಎದುರಿಸಿದ ಪೂನಂ 2 ಬೌಂಡರಿ ಸಹಿತ36 ರನ್ ಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.