ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಪಂದ್ಯ: ಇಂಗ್ಲೆಂಡ್‌ ಲಯನ್ಸ್‌ ‌ವಿರುದ್ಧ ಭಾರತ 'ಎ' ತಂಡ ಮೇಲುಗೈ

Published 12 ಜನವರಿ 2024, 15:13 IST
Last Updated 12 ಜನವರಿ 2024, 15:13 IST
ಅಕ್ಷರ ಗಾತ್ರ

ಅಹಮಾದಾಬಾದ್‌: ಆರಂಭಿಕ ಬ್ಯಾಟರ್‌ ರಜತ್‌ ಪಾಟಿದಾರ್‌ ಅವರ ಅಜೇಯ ಅರ್ಧಶತಕ ಮತ್ತು ಮಾನವ್‌ ಸುತಾರ್‌ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ‘ಎ’ ತಂಡವು ಇಂಗ್ಲೆಂಡ್ ಲಯನ್ಸ್‌ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವಾದ ಶುಕ್ರವಾರ ಮೇಲುಗೈ ಸಾಧಿಸಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನ ‘ಬಿ’ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೌಲರ್‌ಗಳ ಶಿಸ್ತಿನ ದಾಳಿಯಿಂದ ಪ್ರವಾಸಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 51.1 ಓವರ್‌ಗಳಲ್ಲಿ 233 ರನ್‌ಗೆ ಅಲೌಟ್‌ ಆಯಿತು. ಡ್ಯಾನ್ ಮೌಸ್ಲಿ (60; 66ಎ, 4x7, 6x1) ಮತ್ತು ಒಲ್ಲಿ ರಾಬಿನ್ಸನ್ (45; 52ಎ) ಅವರು ಮಧ್ಯಮ ಕ್ರಮಾಂಕದಲ್ಲಿ ಲಯನ್ಸ್‌ಗೆ ಕೊಂಚ ಬಲ ತುಂಬಿದರು. ಎಡಗೈ ಸ್ಪಿನ್ನರ್ ಸುತಾರ್‌ ಮೂರು ವಿಕೆಟ್‌ ಪಡೆದರೆ, ವೇಗಿ ಆಕಾಶ್‌ ದೀಪ್‌ ಎರಡು ವಿಕೆಟ್‌ ಕಬಳಿಸಿದರು.

ಪ್ರತ್ಯುತ್ತರವಾಗಿ ನಾಯಕ ಅಭಿಮನ್ಯು ಈಶ್ವರನ್ (32) ಮತ್ತು ರಜತ್ ಪಾಟಿದಾರ್ (ಔಟಾಗದೆ 61; 75ಎ, 4x9, 6x1) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 73 ರನ್ ಸೇರಿಸಿ ಭಾರತ ‘ಎ’ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅಭಿಮನ್ಯು ಔಟಾದ ನಂತರ ಬಂದ ಪ್ರದೋಶ್ ರಂಜನ್ ಪಾಲ್ (ಔಟಾಗದೆ 24) ಅವರು ರಜತ್‌ ಜೊತೆ ಕ್ರೀಸ್‌ನಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಎ ತಂಡವು 26 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್‌ ಲಯನ್ಸ್‌: ಮೊದಲ ಇನ್ನಿಂಗ್ಸ್‌: 51.1 ಓವರ್‌ಗಳಲ್ಲಿ 233 (ಡಾನ್ ಮೌಸ್ಲಿ 60; ಮಾನವ್‌ ಸುತಾರ್‌ 45ಕ್ಕೆ 3, ಆಕಾಶ್‌ ದೀಪ್‌ 28ಕ್ಕೆ 2).

ಭಾರತ ‘ಎ’: 26 ಓವರ್‌ಗಳಲ್ಲಿ 1 ವಿಕೆಟ್‌ಗೆ 123 (ರಜತ್‌ ಪಾಟಿದಾರ್‌ ಔಟಾಗದೆ 61, ಪ್ರದೋಶ್ ರಂಜನ್ ಪಾಲ್ ಔಟಾಗದೆ 24; ಬ್ರೈಡನ್ ಕಾರ್ಸೆ 23ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT