ಮವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಕ್ರೀಡಾ ಸರಣಿ ನಡೆಸುವುದಿಲ್ಲ. ಆದರೆ, ಮುಂದಿನ ತಿಂಗಳು ಏಷ್ಯಾ ಕಪ್ ಸರಣಿಗೆ ಭಾರತ ತಂಡ ಕಳುಹಿಸುವುದನ್ನು ತಡೆಯುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

ಭಾರತದ ಅಂತರರಾಷ್ಟ್ರೀಯ ಸರಣಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

‘ದ್ವಿಪಕ್ಷೀಯ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ, ಭಾರತೀಯ ತಂಡಗಳು ಪಾಕಿಸ್ತಾನದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಿಲ್ಲ. ಪಾಕಿಸ್ತಾನಿ ತಂಡಗಳು ಭಾರತದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ನಾವು ಅನುಮತಿಸುವುದಿಲ್ಲ’ ಎಂದು ಅದು ಹೇಳಿದೆ.

ಆದರೂ, ಬಹುಪಕ್ಷೀಯ ಸರಣಿಗಳ ಮೇಲೆ ಈ ನೀತಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಬಹುಪಕ್ಷೀಯ ಸರಣಿಯಾಗಿರುವ ಏಷ್ಯಾ ಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಆಡುವುದನ್ನು ನಾವು ತಡೆಯುವುದಿಲ್ಲ’ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ಭಾರತದ ನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ಅನುಮತಿಸಲಾಗುವುದಿಲ್ಲ. ಆದರೆ, ನಾವು ಒಲಿಂಪಿಕ್ ಚಾರ್ಟರ್ಗೆ ಬದ್ಧರಾಗಿರುವುದರಿಂದ ಬಹುಪಕ್ಷೀಯ ಸರಣಿಗಳಲ್ಲಿ ಭಾಗವಹಿಸದಂತೆ ತಂಡವನ್ನು ತಡೆಯುವುದಿಲ್ಲ’ಎಂದು ಅದು ಹೇಳಿದೆ.

ಯಾವುದೇ ಬಹುಪಕ್ಷೀಯ ಸರಣಿಗಳಿಗಾಗಿ ಭಾರತ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿಸಲಾಗುತ್ತದೆಯೇ ಎಂದು ಕೇಳಿದಾಗ, ಆ ಸನ್ನಿವೇಶದಲ್ಲಿ, ಏನನ್ನಾದರೂ ನಿರ್ಧರಿಸುವ ಮೊದಲು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.