ಕರಾಚಿ: ಭಾರತದ ಸರಣಿ ದಾಳಿ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತುರ್ತು ಸಭೆ ಕರೆದಿದೆ. ಸದ್ಯ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಿದೆ.
.ಪಾಕ್ ಸೇನೆ ಸೇರಲು ಉತ್ಸುಕ: ವಿಂಡೀಸ್ ಆಟಗಾರ ಸ್ಯಾಮುಯಲ್ಸ್.
6 ಫ್ರಾಂಚೈಸಿಗಳನ್ನು ಒಳಗೊಂಡ ಈ ಟೂರ್ನಿಯ ಅಂತಿಮ ಹಂತದ ಪಂದ್ಯಗಳು ರಾವಲ್ಪಿಂಡಿಯಲ್ಲಿ ನಡೆಯುತ್ತಿದ್ದು, ಮೇ 18ರಂದು ಲಾಹೋರ್ನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ. ಹಲವು ವಿದೇಶಿ ಆಟಗಾರರು ಟೂರ್ನಿಯ ಭಾಗವಾಗಿದ್ದಾರೆ.

ಗುರುವಾರ ಸಂಜೆ ಪಿಸಿಬಿ ಸಭೆ ಸೇರಲಿದ್ದು, ಟೂರ್ನಿಯ ಭವಿಷ್ಯದ ಬಗ್ಗೆ ಸರ್ಕಾರದ ಸಲಹೆ ಆಧರಿಸಿ ಪಿಸಿಬಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಂಬಲಾರ್ಹ ಮೂಲಗಳಿಂದ ಮಾಹಿತಿ ಸಿಕ್ಕಿದೆ.
.Operation Sindoor | ಕರೆ ಬಂದರೆ ಈಗಲೂ ಯುದ್ಧಕ್ಕೆ ಸಿದ್ಧ: ಮಾಜಿ ಸೈನಿಕರ ಮಾತು.
ಬುಧವಾರದಿಂದ ಭಾರತ ಡ್ರೋನ್ ದಾಳಿ ನಡೆಸುತ್ತಿದೆ. ವಿಶೇಷವಾಗಿ ಪಂಜಾಬ್ ಪ್ರಾಂತ್ಯದಲ್ಲಿ ಹೆಚ್ಚಿನ ದಾಳಿಯಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಲಿದೆ ಎಂದು ಮೂಲಗಳು ತಿಳಿಸಿವೆ.

ಪಿಎಸ್ಎಲ್ನ ಸಿಇಒ ಸಲ್ಮಾನ್ ನಸೀರ್ ರಾವಲ್ಪಿಂಡಿಯಲ್ಲಿ ವಿದೇಶಿ ಆಟಗಾರರನ್ನು ಭೇಟಿಯಾಗಿದ್ದು, ಪಿಸಿಬಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಭಯಪಡಬೇಕಾದ ಅಗತ್ಯ ಇಲ್ಲ ಎಂದು ಅವರಿಗೆ ಅಭಯ ನೀಡಿದ್ದಾರೆ.
.Operation Sindoor | ಐಪಿಎಲ್ ಮೇಲೂ ಪರಿಣಾಮ; ಧರ್ಮಶಾಲಾದ ಪಂದ್ಯ ಸ್ಥಳಾಂತರ.
ಡೇವಿಡ್ ವಾರ್ನರ್ (ಕರಾಚಿ ಕಿಂಗ್ಸ್), ಜೇಸನ್ ಹೋಲ್ಡರ್ ಹಾಗೂ ರಸಿ ವ್ಯಾನ್ ಡೆರ್ ಡಸೆ (ಇಸ್ಲಾಮಾಬಾದ್ ಯುನೈಟೆಡ್) ಸೇರಿ ಪ್ರಮುಖ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸಿದ್ದಾರೆ.

‘ಸದ್ಯದ ಪರಿಸ್ಥಿತಿ ಸಭೆಯಲ್ಲಿ ಚರ್ಚೆಗೆ ಬರಬಹುದು. ಆಟಗಾರರಿಗೆ ಪಾಕಿಸ್ತಾನ ಸೇನೆ ಭಾರಿ ಭದ್ರತೆ ನೀಡಿದೆ’ ಎಂದು ಪಿಸಿಬಿ ವಕ್ತಾರ ಅಮಿರ್ ಮೀರ್ ಹೇಳಿದ್ದಾರೆ.

‘ಎರಡೂ ಕಡೆಯಿಂದ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಿದೆ. ಆದರೆ ಇದು ಪಿಎಸ್ಎಲ್ ಮೇಲೆ ಪ್ರಭಾವ ಬೀರದು ಎನ್ನುವ ವಿಶ್ವಾಸ ನಮಗಿದೆ. ಆದರೆ, ದೇವರು ತಡೆಯಲಿ, ದಾಳಿ ಮುಂದುವರಿದರೆ ನಾವು ಒಟ್ಟು ಕುಳಿತು ಮುಂದಿನ ತೀರ್ಮಾನದ ಬಗ್ಗೆ ನಿರ್ಧರಿಸಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
.Operation Sindoor | ಪಂಜಾಬ್ನ ಆರು ಗಡಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.