ಸೋಮವಾರ, ಜುಲೈ 26, 2021
21 °C

ಭಾರತದ ವಿರುದ್ಧ ಸರಣಿ ಅತಿ ವಿಶೇಷವಾದದ್ದು: ಸ್ಮಿತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಟೀವ್‌ ಸ್ಮಿತ್‌–ಎಎಫ್‌ಪಿ ಚಿತ್ರ

ನವದೆಹಲಿ: ‘ಅತ್ಯಂತ ವಿಶೇಷ’ ಎನಿಸಿರುವ ಭಾರತ ವಿರುದ್ಧದ ಸರಣಿಗಾಗಿ ಕಾತರದಿಂದ ಕಾಯುತ್ತಿರುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರ ಸ್ಟೀವ್‌ ಸ್ಮಿತ್ ಹೇಳಿದ್ದಾರೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ, ಮೂರು ಏಕದಿನ, ನಾಲ್ಕು ಟೆಸ್ಟ್‌ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

‘ಭಾರತ ಒಂದು ಅದ್ಭುತ ತಂಡ. ಆ ತಂಡವನ್ನು ಎದುರುಗೊಳ್ಳಲು ಕಾತರನಾಗಿದ್ದು, ಇದೊಂದು ಅತ್ಯಂತ ವಿಶೇಷ ಸರಣಿಯಾಗಿರಲಿದೆ’ ಎಂದು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯ ‘ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಸ್ಮಿತ್‌ ಹೇಳಿದ್ದಾರೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ಮಾತನಾಡಿದ ಸ್ಮಿತ್‌ ಅವರೊಬ್ಬ ‘ಮಹಾನ್‌ ವ್ಯಕ್ತಿ’ ಎಂದು ಬಣ್ಣಿಸಿದರು.

‘ಕ್ರೀಡಾಂಗಣದ ಹೊರಗೆ ಅವರೊಂದಿಗೆ (ಕೊಹ್ಲಿ) ಹಲವು ಬಾರಿ ಮಾತನಾಡಿದ್ದೇನೆ. ಭಾರತದಲ್ಲಿನ ಸ್ಥಿತಿಯ ಕುರಿತು ಚರ್ಚೆ ನಡೆಸಿದ್ದೇವೆ. ಅವರೊಬ್ಬ ಮಹಾ ವ್ಯಕ್ತಿ. ಕ್ರೀಡಾಂಗಣದಲ್ಲಿ ನಾವಿಬ್ಬರೂ ಕಠಿಣವಾಗಿ ವರ್ತಿಸಿದ್ದೇವೆ. ಪಂದ್ಯಗಳಲ್ಲಿ ಇದು ಸಾಮಾನ್ಯ’ ಎಂದು ಸ್ಮಿತ್‌ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು