ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ

Last Updated 13 ಅಕ್ಟೋಬರ್ 2019, 10:57 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆದ ಫ್ರೀಡಂ ಟೆಸ್ಟ್ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 137 ರನ್‌ಗಳಿಂದ ಪರಾಭವಗೊಳಿಸುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ ಸತತ 11 ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಭಾರತೀಯ ಕ್ರಿಕೆಟ್ ತಂಡ ಪಾತ್ರವಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ 9 ಸರಣಿಗಳನ್ನು ಗೆದ್ದಿದ್ದು, ಎರಡು ಸರಣಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಗೆದ್ದುಕೊಂಡಿತ್ತು.

326 ರನ್‌ ಗುರಿಯನ್ನು ಬೆನ್ನತ್ತಿ ಬ್ಯಾಟಿಂಗ್‌ಗಿಳಿದ ದಕ್ಷಿಣ ಆಫ್ರಿಕಾ 67.2ನೇ ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದೆ.

ಆಟ ಮುಗಿಯಲು ಇನ್ನೊಂದು ದಿನ ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ವಿರುದ್ಧಅತೀ ಹೆಚ್ಚು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ ಕೀರ್ತಿಯೂ ಟೀಂ ಇಂಡಿಯಾಗೆ ಸಂದಿದೆ.ಈ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಪಂದ್ಯ ಗೆದ್ದಿದ್ದು, ಮೂರನೇ ಟೆಸ್ಟ್ 19ನೇ ತಾರೀಖಿನಂದು ರಾಂಚಿಯಲ್ಲಿ ಆರಂಭವಾಗಲಿದೆ.

ಸ್ಕೋರ್:
ಭಾರತ - 601/5 ಡಿಕ್ಲೇರ್ಡ್
ದಕ್ಷಿಣ ಆಫ್ರಿಕಾ: 257 ಮತ್ತು 189
ಎರಡನೇ ಇನ್ನಿಂಗ್ಸ್‌ನಲ್ಲಿ 48 ರನ್ ಗಳಿಸಿದ ಡೀನ್‌ ಎಲ್ಗರ್‌ ದಕ್ಷಿಣ ಆಫ್ರಿಕಾ ತಂಡದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮೆನ್. 72 ಎಸೆತಗಳನ್ನು ಎದುರಿಸಿದ್ದ ಎಲ್ಗರ್ 8 ಬೌಂಡರಿಗಳನ್ನು ಹೊಡೆದಿದ್ದಾರೆ. ಇನ್ನುಳಿದಂತೆ ತಂಬೆ ಬವುಮಾ (38), ಫಿಲಾಂಡರ್ (37) ಮತ್ತು ಮಹಾರಾಜ್ (22) ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT