ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs IND 1st ODI: ಭಾರತದ ವಿರುದ್ಧ 66 ರನ್‌ಗಳಿಂದ ಜಯ ಗಳಿಸಿದ ಆಸ್ಟ್ರೇಲಿಯಾ

Last Updated 27 ನವೆಂಬರ್ 2020, 12:25 IST
ಅಕ್ಷರ ಗಾತ್ರ

ಸಿಡ್ನಿ:ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. 66 ರನ್‌ಗಳಿಂದ ಆಸ್ಟ್ರೇಲಿಯಾ ಈ ಪಂದ್ಯ ಗೆದ್ದುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374 ರನ್ ದಾಖಲಿಸಿತ್ತು. ಈ ಸವಾಲನ್ನು ಸ್ವೀಕರಿಸಿಆಸ್ಟ್ರೇಲಿಯಾದ ವಿರುದ್ಧ ಬ್ಯಾಟಿಂಗ್‌ಗಿಳಿದ ಭಾರತ ತಂಡದ ಆರಂಭಿಕಪ್ರದರ್ಶನ ನಿರಾಸೆ ಮೂಡಿಸಿತ್ತು. ಆರಂಭಿಕ ದಾಂಡಿಗರಾಗಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಕ್ರೀಸ್‌ಗಿಳಿದಿದ್ದು 6ನೇ ಓವರ್‌ನಲ್ಲಿ ಮಯಂಕ್ವಿಕೆಟ್ ಕಳೆದುಕೊಂಡರು.

ಮಯಂಕ್ ಅಗರ್‌ವಾಲ್ 22 ರನ್ ದಾಖಲಿಸಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದಾಗ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ವಿರಾಟ್ ಕೊಹ್ಲಿ 21 ಎಸೆತಗಳಲ್ಲಿ 21 ರನ್ ದಾಖಲಿಸಿ ಹ್ಯಾಜಲ್‌ವುಡ್ ಎಸೆತಕ್ಕೆ ಔಟಾದರು.ನಂತರ ಬಂದ ಶ್ರೇಯಸ್ ಅಯ್ಯರ್ (2),ಕೆ,ಎಲ್.ರಾಹುಲ್ (12) ರನ್ ಗಳಿಸಿ ಪೆವಿಲಿಯನ್‌ತ್ತ ಹೆಜ್ಜೆ ಹಾಕಿದರು.

ಈ ಹೊತ್ತಲ್ಲಿ ಶಿಖರ್ ಧವನ್ ಜತೆಗೆಹಾರ್ದಿಕ್ ಪಾಂಡ್ಯಭಾರತಕ್ಕೆ ಆಸರೆಯಾಗಿ ನಿಂತರು.

35ನೇ ಓವರ್‌ನಲ್ಲಿ ಶಿಖರ್ ಧವನ್ ಜಂಪಾ ಎಸೆತಕ್ಕೆ ಸ್ಟಾರ್ಕ್‌ಗೆ ಕ್ಯಾಚಿತ್ತು ಔಟಾದರು. 86 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಧವನ್ 74 ರನ್ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ 39ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪತನವಾಯಿತು. 76 ಎಸೆತಗಳಲ್ಲಿ 90 ರನ್ ದಾಖಲಿಸಿದ ಪಾಂಡ್ಯ ಜಂಪಾ ಎಸೆತಕ್ಕೆ ಸ್ಟಾರ್ಕ್‌ಗೆ ಕ್ಯಾಚಿತ್ತರು. ಅದ್ಭುತ ಪ್ರದರ್ಶನ ನೀಡಿದ ಪಾಂಡ್ಯ 7 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದ್ದಾರೆ. ನಂತರ ಬಂದ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 25 ರನ್ ದಾಖಲಿಸಿ ಜಂಪಾ ಎಸೆತಕ್ಕೆ ಔಟಾದರು.

ಜಡೇಜಾ ನಂತರ ಬ್ಯಾಟಿಂಗ್‌ಗಿಳಿದ ಸೈನಿ 35 ಎಸೆತಗಳಲ್ಲಿ 29 ರನ್ ದಾಖಲಿಸಿ ಔಟಾಗದೆ ಉಳಿದರು. ಮೊಹಮ್ಮದ್ ಶಮಿ 13 ರನ್ ಗಳಿಸಿ ಔಟಾಗಿದ್ದು ಬೂಮ್ರಾ 3 ಎಸೆತಗಳಲ್ಲಿ ರನ್ ಕಲೆ ಹಾಕಿಲ್ಲ.

ನಿಗದಿತ 50 ಓವರ್‌ಗಳಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 308 ರನ್ ದಾಖಲಿಸಿದೆ.

ಆಸ್ಟ್ರೇಲಿಯಾದ ಪರವಾಗಿ ಜೋಶ್ ಹ್ಯಾಜಲ್‌ವುಡ್ 3 ವಿಕೆಟ್,ಸ್ಟಾರ್ಕ್ -1 ಮತ್ತುಆ್ಯಡಂ ಜಂಪಾ 4 ವಿಕೆಟ್ ಕಬಳಿಸಿದ್ದಾರೆ.

ಆಸ್ಟ್ರೇಲಿಯಾದಡೇವಿಡ್ ವಾರ್ನರ್ (69 ), ಆ್ಯರನ್ ಫಿಂಚ್ (114), ಸ್ಟೀವ್ ಸ್ಮಿತ್ (105), ಗ್ಲೆನ್ ಮ್ಯಾಕ್ಸ್‌ವೆಲ್‌ (45) - ಈ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು.ಭಾರತದ ಪರವಾಗಿ ಮೊಹಮ್ಮದ್ ಶಮಿ- 3, ಜಸ್‌ಪ್ರೀತ್ ಬೂಮ್ರಾ,ನವದೀಪ್ ಸೈನಿ, ಯಜುವೇಂದ್ರ ಚಾಹಲ್ ತಲಾ 1 ವಿಕೆಟ್ ಗಳಿಸಿದ್ದಾರೆ.

ತಂಡಗಳು

ಭಾರತ:ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್‌.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌),ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್‌, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ:ಆ್ಯರನ್ ಫಿಂಚ್ (ನಾಯಕ), ಡೇವಿಡ್‌ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)‌, ಪ್ಯಾಟ್ ಕಮಿನ್ಸ್, ಮಿಷೆಲ್ ಸ್ಟಾರ್ಕ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌, ಸೀನ್ ಅಬೋಟ್‌, ಆ್ಯಶ್ಟನ್ ಅಗರ್‌, ಕ್ಯಾಮರೂನ್ ಗ್ರೀನ್‌, ಮೊಯಸಸ್ ಹೆನ್ರಿಕ್ಸ್‌, ಆ್ಯಂಡ್ರ್ಯೂ ಟೈ, ಡ್ಯಾನಿಯಲ್ ಸ್ಯಾಮ್ಸ್‌, ಮ್ಯಾಥ್ಯೂ ವೇಡ್‌ (ವಿಕೆಟ್ ಕೀಪರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT