IND vs AUS 1st Test: ಸೂರ್ಯ, ಭರತ್ ಪದಾರ್ಪಣೆ; ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ನಾಗಪುರ: ಆತಿಥೇಯ ಭಾರತ ವಿರುದ್ಧದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಲ್ಲಿನ ಜಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಸೂರ್ಯ, ಭರತ್ ಪದಾರ್ಪಣೆ...
ಟೀಮ್ ಇಂಡಿಯಾ ಪರ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ಕೋನಾ ಭರತ್ ಪದಾರ್ಪಣೆ ಮಾಡಿದ್ದಾರೆ.
ಕೆ.ಎಲ್. ರಾಹುಲ್ ತಂಡದಲ್ಲಿದ್ದು, ಇದರಿಂದಾಗಿ ಶುಭಮನ್ ಗಿಲ್ ಅವಕಾಶ ವಂಚಿತರಾಗಿದ್ದಾರೆ. ತ್ರಿವಳಿ ಸ್ಪಿನ್ನರ್‌ಗಳ ತಂತ್ರದೊಂದಿಗೆ ಭಾರತ ಕಣಕ್ಕಿಳಿದಿದೆ.
SKY makes his TEST DEBUT as he receives the Test cap from former Head Coach @RaviShastriOfc 👏 👏
Good luck @surya_14kumar 👍 👍#TeamIndia | #INDvAUS | @mastercardindia pic.twitter.com/JVRyK0Vh4u
— BCCI (@BCCI) February 9, 2023
ಆಡುವ ಬಳಗ ಇಂತಿದೆ:
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೋನಾ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಮ್ಯಾಟ್ ರೆನ್‌ಷಾ, ಪೀಟರ್ ಹ್ಯಾಂಡ್ಸ್‌ಕಾಂಬ್, ಅಲೆಕ್ಸ್ ಕೇರಿ (ವಿಕೆಟ್ ಕೀಪರ್), ಪ್ಯಾಟ್ ಕಮನ್ಸ್ (ನಾಯಕ), ನಥನ್ ಲಯನ್, ಟಾಡ್ ಮುರ್ಫಿ, ಸ್ಕಾಟ್ ಬೋಲಾಂಡ್.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗುರಿ...
ಈ ಸರಣಿಯಲ್ಲಿ ಜಯಿಸುವುದು ಉಭಯ ತಂಡಗಳಿಗೂ ಮುಖ್ಯವಾಗಿದೆ. ಏಕೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ, ಅಗ್ರ ಎರಡು ಸ್ಥಾನಗಳಲ್ಲಿವೆ. ತಮ್ಮ ಸ್ಥಾನಗಳನ್ನು ಉಳಿಸಿಕೊಂಡರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಸುಗಮವಾಗಲಿದೆ. ಅದಕ್ಕೆ ಬೇಕಾಗಿರುವ ಅಂಕಗಳನ್ನು ಗಳಿಸಲು ಈ ಸರಣಿ ನಿರ್ಣಾಯಕವಾಗಿದೆ.
Debut in international cricket for @KonaBharat 👍 👍
A special moment for him as he receives his Test cap from @cheteshwar1 👌 👌#TeamIndia | #INDvAUS | @mastercardindia pic.twitter.com/dRxQy8IRvZ
— BCCI (@BCCI) February 9, 2023
🚨 Toss Update 🚨
Australia have elected to bat against #TeamIndia in the 1⃣st #INDvAUS Test in Nagpur.
Follow the match ▶️ https://t.co/SwTGoyHfZx @mastercardindia pic.twitter.com/6ZnOd6MsCO
— BCCI (@BCCI) February 9, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.