ಮಂಗಳವಾರ, ನವೆಂಬರ್ 29, 2022
21 °C

IND vs AUS: ವಿರಾಟ್ ಕೊಹ್ಲಿ ಹಾವಭಾವ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೊಹಾಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ಮಂಗಳವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಿದೆ.

ಈ ಪಂದ್ಯದಲ್ಲಿ ವಿರಾಟ್ ಅವರ ಬ್ಯಾಟ್ ಹೆಚ್ಚು ಸದ್ದು ಮಾಡಲಿಲ್ಲ. ಆದರೆ ಮಾಜಿ ನಾಯಕನ ಹಾವಭಾವ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 

ಆಸೀಸ್ ಇನ್ನಿಂಗ್ಸ್ ವೇಳೆಯಲ್ಲಿ ಉಮೇಶ್ ಯಾದವ್ ಎಸೆತವನ್ನು ಕ್ಯಾಮರೂನ್ ಗ್ರೀನ್ ಬೌಂಡರಿಗಟ್ಟಿದರು. ಈ ವೇಳೆ ಕ್ಯಾಮರಾ ಕಣ್ಣುಗಳು ವಿರಾಟ್ ಕೊಹ್ಲಿ ಅವರ ವಿಚಿತ್ರ ಹಾವಭಾವವನ್ನು ಸೆರೆಹಿಡಿಯಿತು.

ವಿರಾಟ್ ಆಶ್ಚರ್ಯಚಕಿತರಾಗಿ ಹಾಗೇ ನೋಡಿದರೇ ಅಥವಾ ಆಸೀಸ್ ಬ್ಯಾಟರ್ ಆಟದಿಂದ ದಿಗಿಲುಗೊಂಡಿದ್ದರೇ ಎಂಬುದು ತಿಳಿದು ಬಂದಿಲ್ಲ.

ತಕ್ಷಣವೇ ಈ ಕುರಿತು ಪ್ರತಿಕ್ರಿಯಿಸಿದ ವೆಸ್ಟ್ ಇಂಡೀಸ್‌ನ ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್, ವಿರಾಟ್ ‌ಕೊಹ್ಲಿ ಮೀಮ್ಸ್ ವೈರಲ್ ಆಗಲಿದೆ ಎಂದು ಟ್ವೀಟಿಸಿದ್ದರು.

 

 

 

ಅವರ ಮಾತು ಸುಳ್ಳಾಗಲಿಲ್ಲ. ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಟ್ಟ ರಿಯಾಕ್ಷನ್ ವೈರಲ್ ಆಯಿತು. ಅಲ್ಲದೆ ಅಭಿಮಾನಿಗಳು ವಿಭಿನ್ನ ರೀತಿಯ ಶೀರ್ಷಿಕೆ ನೀಡುವ ಮೂಲಕ ವಿರಾಟ್ ಚಿತ್ರದ ಮನರಂಜನೆಯನ್ನು ಪಡೆದರು.

 

ಏತನ್ಮಧ್ಯೆ ಮೊಹಾಲಿ ಪಂದ್ಯದಲ್ಲಿ ಭಾರತ 208 ರನ್‌ಗಳ ಬೃಹತ್ ಮೊತ್ತ ಪೇರಿಸಿಯೂ ಸೋಲಿಗೆ ಶರಣಾಯಿತು. ಆಸ್ಟ್ರೇಲಿಯಾ 19.2 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು