ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs BAN 2nd ODI: ಒತ್ತಡದಲ್ಲಿ ರೋಹಿತ್ ಬಳಗ

Last Updated 7 ಡಿಸೆಂಬರ್ 2022, 2:11 IST
ಅಕ್ಷರ ಗಾತ್ರ

ಮೀರ್‌ಪುರ್: ಭಾರತ ಕ್ರಿಕೆಟ್ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಹಾಗೂ ಫೀಲ್ಡಿಂಗ್ ವೈಫಲ್ಯಗಳಿಂದ ಹೊರಬರುವ ಒತ್ತಡದಲ್ಲಿರುವ ಭಾರತ ತಂಡವು ಬುಧವಾರ ಬಾಂಗ್ಲಾದೇಶದ ವಿರುದ್ಧ ಎರಡನೇ ಏಕದಿನ ಪಂದ್ಯ ಆಡಲಿದೆ.

ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಅಂತರದಿಂದ ಭಾರತ ತಂಡವು ಸೋತಿತ್ತು. ಬಾಂಗ್ಲಾ ತಂಡದ ಗೆಲುವಿಗೆ ಇನ್ನೂ 50ಕ್ಕೂ ಹೆಚ್ಚು ರನ್‌ಗಳ ಅಗತ್ಯವಿದ್ದಾಗಲೇ 9 ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಆದರೆ, ಕೊನೆಯ ವಿಕೆಟ್ ಜೊತೆಯಾಟದಲ್ಲಿ ಮೆಹದಿ ಹಸನ್ ಮಿರಾಜ್ ಮತ್ತು ಮುಸ್ತಫಿಜುರ್ ರೆಹಮಾನ್ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಅದಕ್ಕೆ ಕಾರಣ ಕೈಬಿಟ್ಟ ಕ್ಯಾಚ್‌ಗಳು ಮತ್ತು ಬೌಲರ್‌ಗಳ ಸತ್ವರಹಿತ ಬೌಲಿಂಗ್ ಕೂಡ ಕಾರಣವಾಗಿತ್ತು. ಆದರೆ, ಆ ಪಂದ್ಯದಲ್ಲಿ ಪ್ರಮುಖವಾಗಿ ಅಗ್ರ ಶ್ರೇಣಿಯ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕೆ.ಎಲ್. ರಾಹುಲ್ ಒಬ್ಬರೇ ಅರ್ಧಶತಕ ಗಳಿಸಿದ್ದರು. ರಾಹುಲ್ ಕೀಪಿಂಗ್‌ನಲ್ಲಿ ಮಾಡಿದ ಕೆಲವು ಲೋಪಗಳು ದುಬಾರಿಯಾಗಿದ್ದವು.ಈ ಎಲ್ಲ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಸರಣಿಯನ್ನು ಕೈಚೆಲ್ಲುವ ಆತಂಕ ಭಾರತ ತಂಡಕ್ಕೆ ಇದೆ. ಮೂರು ಪಂದ್ಯಗಳ ಸರಣಿಯ 2ನೇ ಪಂದ್ಯ ಭಾರತ ಜಯಿಸಿದರೆ ಮಾತ್ರ ಸರಣಿ ಜಯದ ಆಸೆ ಜೀವಂತವಾಗುಳಿಯಲಿದೆ.2015ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು 1–2ರಿಂದ ಏಕದಿನ ಸರಣಿಯನ್ನು ಬಾಂಗ್ಲಾದಲ್ಲಿ ಸೋತಿತ್ತು. ಆತಿಥೇಯ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಮಿರಾಜ್, ಲಿಟನ್ ದಾಸ್ ಮತ್ತು ಬೌಲಿಂಗ್‌ನಲ್ಲಿ ಮುಸ್ತಫಿಜುರ್ ರೆಹಮಾನ್ ಉತ್ತಮ ಲಯದಲ್ಲಿದ್ದಾರೆ.

ಪಂದ್ಯ ಆರಂಭ: ಬೆಳಿಗ್ಗೆ 11.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT