ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG Test: ರೋಹಿತ್‌ ಶರ್ಮಾ, ಶುಭಮನ್ ಗಿಲ್‌ ಶತಕ; ಭಾರತಕ್ಕೆ ಮುನ್ನಡೆ

Published 8 ಮಾರ್ಚ್ 2024, 6:50 IST
Last Updated 8 ಮಾರ್ಚ್ 2024, 6:50 IST
ಅಕ್ಷರ ಗಾತ್ರ

ಧರ್ಮಶಾಲಾ: ಇಂಗ್ಲೆಂಡ್‌ ಬೌಲರ್‌ಗಳನ್ನು ವಿಶ್ವಾಸದಿಂದ ಎದುರಿಸಿದ ರೋಹಿತ್‌ ಶರ್ಮಾ ಮತ್ತು ಶುಭಮನ್ ಗಿಲ್‌‌ ಶತಕ ಸಿಡಿಸಿದರು.

ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಎರಡನೇ ದಿನವಾದ ಶುಕ್ರವಾರ ಇಬ್ಬರು ಶತಕ ಸಿಡಿಸಿ ಸಂಭ್ರಮಿಸಿದರು. ಊಟದ ವಿರಾಮದ ವೇಳೆಗೆ ರೋಹಿತ್‌ ಶರ್ಮಾ 102, ಗಿಲ್‌ 101 ರನ್‌ಗಳಿಸಿ ಆಡುತ್ತಿದ್ದರು.

ನಿನ್ನೆ ಭಾರತ 30 ಓವರುಗಳಲ್ಲಿ 1 ವಿಕೆಟ್‌ಗೆ 135 ರನ್ ಗಳಿಸಿ ದಿನದಾಟ ಮುಗಿಸಿತು. ಯಶಸ್ವಿ ಜೈಸ್ವಾಲ್ (57 ರನ್‌) ಔಟಾಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರದ್ದು 12ನೇ ಶತಕವಾದರೇ, ಗಿಲ್‌ ಅವರದ್ದು ನಾಲ್ಕನೇ ಶತಕವಾಗಿದೆ. 

ಕುಲದೀಪ್ ಯಾದವ್ ನೇತೃತ್ವದಲ್ಲಿ ಸ್ಪಿನ್‌ತ್ರಯರು ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಮುದುರಿತು. ರವಿಚಂದ್ರನ್ ಅಶ್ವಿನ್ 4, ಕುಲದೀಪ್ ಯಾದವ್ 5 ಹಾಗೂ ಜಡೇಜ 1 ವಿಕೆಟ್‌ ಪಡೆದರು. 

ಊಟದ ವಿರಾಮದ ವೇಳೆಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಕಳೆದುಕೊಂಡು 264 ರನ್‌ಗಳಿಸಿದೆ. ಈ ಮೂಲಕ ಭಾರತ 46 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 

ಸ್ಕೋರ್‌

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 218–10

ಭಾರತ ಮೊದಲ ಇನ್ನಿಂಗ್ಸ್‌: 264–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT