ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್: ಕುಂಬ್ಳೆ ದಾಖಲೆ ಮುರಿದ ಆ್ಯಂಡರ್ಸನ್

Last Updated 6 ಆಗಸ್ಟ್ 2021, 16:26 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಂ:ಟೆಸ್ಟ್‌ ಕ್ರಿಕೆಟ್‌ನಲ್ಲಿ600 ವಿಕೆಟ್‌ ಸಾಧನೆ ಮಾಡಿರುವ ಏಕೈಕ ವೇಗಿ ಎನಿಸಿದ್ದ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ.‌ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ 39 ವರ್ಷದ ಈ ವೇಗಿ,ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ಪಡೆದವರ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ನಾಟಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿಕನ್ನಡಿಗ ಕೆ.ಎಲ್.ರಾಹುಲ್‌ (84), ನಾಯಕ ವಿರಾಟ್‌ ಕೊಹ್ಲಿ (0),ಚೇತೇಶ್ವರ ಪೂಜಾರ (4) ಮತ್ತು ಶಾರ್ದೂಲ್‌ ಠಾಕೂರ್‌ (0)ಆ್ಯಂಡರ್ಸನ್‌ಗೆವಿಕೆಟ್‌ ಒಪ್ಪಿಸಿದರು.

163ನೇ ಟೆಸ್ಟ್‌ ಆಡುತ್ತಿರುವ ಜೇಮ್ಸ್‌ ಈವರೆಗೆ ಒಟ್ಟು621 ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್‌ ದಾರಿ ತೋರಿದ್ದಾರೆ. ಇದರೊಂದಿಗೆ ಅವರು ಈವರೆಗೆ ಮೂರನೇ ಸ್ಥಾನ ಕಾಯ್ದುಕೊಂಡಿದ್ದ ಕನ್ನಡಿಗ ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ.132 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆ619 ವಿಕೆಟ್‌ಗಳನ್ನು ಉರುಳಿಸಿದ್ದರು.

ಸದ್ಯಸ್ಪಿನ್‌ ದಂತಕಥೆಗಳಾದಶ್ರೀಲಂಕಾ ತಂಡದಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಬೌಲರ್ ಶೇನ್‌ ವಾರ್ನ್‌ಮಾತ್ರವೇ ಇಂಗ್ಲೆಂಡ್‌ ವೇಗಿಗಿಂತ ಮುಂದಿದ್ದಾರೆ. ಮುರುಳಿಧರನ್‌ ಖಾತೆಯಲ್ಲಿ ಬರೋಬ್ಬರಿ800ಮತ್ತು ವಾರ್ನ್‌ ಬಳಿ708 ವಿಕೆಟ್‌ಗಳಿವೆ.

ಉಳಿದಂತೆ ಐನೂರಕ್ಕಿಂತ ಹೆಚ್ಚು ವಿಕೆಟ್‌ ಸಾಧನೆ ಮಾಡಿರುವಆಸ್ಟ್ರೇಲಿಯಾದ ವೇಗಿ ಗ್ಲೇನ್‌ ಮೆಕ್‌ಗ್ರಾತ್‌ (563), ಇಂಗ್ಲೆಂಡ್‌ನವರೇ ಆದ ಸ್ಟುವರ್ಟ್‌ ಬ್ರಾಡ್‌ (523) ಹಾಗೂ ವೆಸ್ಟ್‌ಇಂಡೀಸ್‌ನ ಕರ್ಟ್ನಿ ವಾಲ್ಶ್‌ (519) ಕ್ರಮವಾಗಿ 5, 6, 7ನೇ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ಇನಿಂಗ್ಸ್‌ ಮುನ್ನಡೆ
ಐದು ಟೆಸ್ಟ್‌ ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು,ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್183 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ278ರನ್‌ ಕಲೆಹಾಕಿದ್ದು,95 ರನ್‌ಗಳ ಮುನ್ನಡೆ ಸಾಧಿಸಿದೆ.

ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಉದ್ಘಾಟನಾ ಸರಣಿಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT