ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನ್ಯೂಜಿಲೆಂಡ್‌ ಸೆಮಿಫೈನಲ್‌ಗೆ ಮಳೆಕಾಟ; ಪಂದ್ಯ ರದ್ದಾದರೆ ಫೈನಲ್‌ಗೆ ಯಾರು?

ವಿಶ್ವಕಪ್‌ ಕ್ರಿಕೆಟ್‌: ಮೀಸಲು ದಿನದ ಪಂದ್ಯದತ್ತ ಕ್ರಿಕೆಟ್ ಪ್ರೇಮಿಗಳ ಚಿತ್ತ
Last Updated 10 ಜುಲೈ 2019, 8:50 IST
ಅಕ್ಷರ ಗಾತ್ರ

ಮ್ಯಾನ್‌ಚೆಸ್ಟರ್‌: ವಿಶ್ವಕಪ್‌ ಕ್ರಿಕೆಟ್‌ 2019ರ ಮೊದಲ ಸೆಮಿಫೈನಲ್‌ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವೆನಡೆದಿದ್ದು, ಮಳೆಯಿಂದಾಗಿ ಅರ್ಧಕ್ಕೆ ನಿಂತಿದೆ. ಉಭಯ ತಂಡಗಳ ಪೈಕಿ ಕ್ರಿಕೆಟ್‌ ಪ್ರಿಯರಿಗೆ ಭಾರತ ನೆಚ್ಚಿನ ತಂಡವಾಗಿದೆ.

ಟೂರ್ನಿಯ ರೌಂಡ್‌ರಾಬಿನ್ ಹಂತದಲ್ಲಿ ಟೀಂ ಇಂಡಿಯಾ ಮತ್ತು ಕಿವೀಸ್‌ ಪಡೆ ನಡುವಿನ ಪಂದ್ಯಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ವಿಶ್ವಕಪ್‌ ಫೈನಲ್ ಹಂತದ ಹಿಂದಿನ ಹೆಜ್ಜೆ ಸೆಮಿಫೈನಲ್‌ಗೂ ವರುಣನ ಆರ್ಭಟ ಕಾಡಿದೆ. ಪಂದ್ಯಕ್ಕೂ ಮುನ್ನವೇ ಬಹಳಷ್ಟು ಜನ ಜುಲೈ 9ರಂದು ಮ್ಯಾನ್‌ಚೆಸ್ಟರ್‌ನ ಹವಾಮಾನ ವರದಿಯನ್ನು ಅಂತರ್ಜಾಲದಲ್ಲಿ ತಡಕಾಡಿದ್ದರು!

ಹವಾಮಾನ ಮುನ್ಸೂಚನೆ ವರದಿಗಳ ಪ್ರಕಾರ, ಮಂಗಳವಾರ ಮತ್ತು ಬುಧವಾರಮಳೆಯಾಗುವ ಸಾಧ್ಯತೆ ಗೋಚರಿಸಿತ್ತು.

ಹವಾಮಾನ ಮುನ್ಸೂಚನೆಯಂತೆಯೇ ಅತ್ಯಂತ ಮಹ್ವತದ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಮಧ್ಯಾಹ್ನ 2:30, ಟಾಸ್‌ ಆಗುವ ಸಮಯಕ್ಕೆ ಮಳೆ ಇರದಿದ್ದರೂ ದಟ್ಟ ಮೋಡ ಆವರಿಸಿತ್ತು. ಆದರೆ, ಮೊದಲನೇ ಇನ್ನಿಂಗ್ಸ್‌ ಪೂರ್ಣಗೊಳ್ಳಲು ಇನ್ನೇನು 3.5 ಓವರ್ ಬಾಕಿಯಿರುವಾಗ ಮಳೆ ಸುರಿಯಿತು. ಪರಿಣಾಮವಾಗಿ ಪಂದ್ಯ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಿಕೆಯಾಗಿದೆ.

ನಿನ್ನೆ ಪಂದ್ಯ ನಡೆದಿದ್ದರೆ ಏನಾಗ್ತಿತ್ತು?

ಒಂದು ವೇಳೆ ಮಂಗಳವಾರ ಮಳೆ ನಿಂತು ಪಂದ್ಯ ನಡೆದಿದ್ದರೆ,ಓವರ್‌ ಕಡಿತಗೊಳಿಸಿ ಪಂದ್ಯ ಮುಂದುವರಿಯುತ್ತಿತ್ತು.ನ್ಯೂಜಿಲೆಂಡ್‌ 46.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 211 ರನ್‌ ಕಲೆ ಹಾಕಿದೆ. ಹೀಗಾಗಿ ಮಳೆ ಪ್ರಾರಂಭವಾದ ನಂತರ ಪ್ರತಿ 4 ನಿಮಿಷಗಳಿಗೆ ಒಂದು ಓವರ್‌ ಕಡಿತಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ನಿಯಮಗಳ ಪ್ರಕಾರ, ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಗರಿಷ್ಠ 2 ಗಂಟೆಗಳ ಕಾಯುವಿಕೆಅವಧಿ ಇದೆ. ಹೀಗಾಗಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರೆ, ಭಾರತಕ್ಕೆ ಕನಿಷ್ಠ 20 ಓವರ್‌ಗಳ ಬ್ಯಾಟಿಂಗ್‌ ಅವಕಾಶ ಸಿಗುತ್ತಿತ್ತು. ಗಳಿಸಬೇಕಾದ ರನ್‌ ಗುರಿ 148 ಆಗಿರುತ್ತಿತ್ತು.

ಆದರೆ ಅದಾಗದಿರುವ ಹಿನ್ನೆಲೆಯಲ್ಲಿ ಮೀಸಲು ದಿನವಾದ ಬುಧವಾರಕ್ಕೆ ಪಂದ್ಯ ಮುಂದೂಡಿಕೆಯಾಗಿದೆ.ಹವಾಮಾನ ಮುನ್ಸೂಚನೆ ಪ್ರಕಾರ ಬುಧವಾರ ಸಹ ಪೂರ್ಣ ಮಳೆಯಿಂದ ಮುಕ್ತವಾಗಿಲ್ಲ.

ಮೀಸಲು ದಿನ ಹೇಗೆ ನಡೆಯಲಿದೆ ಪಂದ್ಯ?

ಮಂಗಳವಾರ ಯಾವ ಹಂತದಲ್ಲಿ ಪಂದ್ಯ ಸ್ಥಗಿತಗೊಂಡಿತ್ತೋ ಅಲ್ಲಿಂದಲೇ ಬುಧವಾರ ಆರಂಭಗೊಳ್ಳಲಿದೆ. ಅಂದರೆ,ನ್ಯೂಜಿಲೆಂಡ್‌ 46.1 ಓವರ್‌ಗಳ ನಂತರದ ಬ್ಯಾಟಿಂಗ್ ಮಾಡಬೇಕು. 50 ಓವರ್ ಪೂರ್ಣಗೊಂಡ ಬಳಿಕ ಭಾರತದ ಬ್ಯಾಟಿಂಗ್ ಸರದಿ. ಒಂದು ವೇಳೆ ಪಂದ್ಯದ ಅರ್ಧದಲ್ಲಿ ಮಳೆ ಅಡ್ಡಿಯಾದರೆ,ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಓವರ್‌ ಮತ್ತು ತಲುಪಬೇಕಾದ ಗುರಿ ನಿಗದಿ ಪಡಿಸಲಾಗುತ್ತದೆ.

ಅಕಸ್ಮಾತ್‌ ಮೀಸಲು ದಿನವೂ ಮಳೆಯಿಂದಾಗಿ ಪಂದ್ಯ ನಡೆಯದೇ ಹೋದರೆ, ಭಾರತ ತಂಡ ಫೈನಲ್‌ ಪ್ರವೇಶಿಸಲಿದೆ. ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡು 15 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದರಿಂದ ಫೈನಲ್‌ ಅವಕಾಶ ಖಚಿತವಾಗಲಿದೆ. 11 ಅಂಕ ಹೊಂದಿರುವ ನ್ಯೂಜಿಲೆಂಡ್‌ ನಾಲ್ಕನೇ ಸ್ಥಾನದಲ್ಲಿದೆ.

ಓಲ್ಡ್ ಟ್ರಾರ್ಫಡ್‌ ಕ್ರೀಡಾಂಗಣದಲ್ಲಿ ನಡೆದ ರೌಂಡ್‌ರಾಬಿನ್‌ ಹಂತದ ಪಂದ್ಯಗಳಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್‌ ಎದುರಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೇ ಕ್ರೀಡಾಂಗಣದಲ್ಲಿ ನ್ಯೂಜೆಲೆಂಡ್‌ ಸಹ ಒಂದು ಪಂದ್ಯದಲ್ಲಿ ಗೆಲುವು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT