ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ: 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲಿದೆ ವಾಂಖೆಡೆ

Last Updated 2 ಡಿಸೆಂಬರ್ 2021, 12:14 IST
ಅಕ್ಷರ ಗಾತ್ರ

ಮುಂಬೈ:2011ರ ಏಕದಿನ ವಿಶ್ವಕಪ್ ಫೈನಲ್‌ ಸೇರಿದಂತೆ ಹಲವು ಮಹತ್ವದ ಪಂದ್ಯಗಳಿಗೆ ಸಾಕ್ಷಿಯಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬಹುತೇಕ ಐದು ವರ್ಷಗಳ ಬಳಿಕ ಟೆಸ್ಟ್ ಪಂದ್ಯವೊಂದಕ್ಕೆ ಸಿದ್ಧತೆ ನಡೆಯುತ್ತಿದೆ. ಭಾರತ–ನ್ಯೂಜಿಲೆಂಡ್ ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯವು ಶುಕ್ರವಾರ (ಡಿ.03 ರಂದು) ಇಲ್ಲಿ ಆರಂಭವಾಗಲಿದೆ.

ಇಲ್ಲಿ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆದದ್ದು2016ರಲ್ಲಿ.ಇಂಗ್ಲೆಂಡ್ ತಂಡದ ವಿರುದ್ಧ ಡಿಸೆಂಬರ್ 8 ರಿಂದ 12ರ ವರೆಗೆ ನಡೆದ ಆ ಪಂದ್ಯವನ್ನು ಭಾರತ, ಇನಿಂಗ್ಸ್ ಹಾಗೂ 36 ರನ್ ಅಂತರದಿಂದ ಗೆದ್ದುಕೊಂಡಿತ್ತು.

ಅಂದಹಾಗೆ, ಈ ಕ್ರೀಡಾಂಗಣದಲ್ಲಿಮೊದಲ ಟೆಸ್ಟ್ ಪಂದ್ಯ ನಡೆದದ್ದು1975ರ ಜನವರಿಯಲ್ಲಿ. ಆಗ ಕ್ರಿಕೆಟ್ ಲೋಕದ ದೈತ್ಯ ತಂಡವೆನಿಸಿದ್ದ ವೆಸ್ಟ್ ಇಂಡೀಸ್, ಟೀಂ ಇಂಡಿಯಾವನ್ನು 201 ರನ್ ಅಂತರದಿಂದ ಮಣಿಸಿತ್ತು.

1976ರಲ್ಲಿ ನ್ಯೂಜಿಲೆಂಡ್ ತಂಡವನ್ನು 162 ರನ್ ಅಂತರದಿಂದಮಣಿಸುವ ಮೂಲಕ ಭಾರತ ತಂಡವು, ಈ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಜಯದ ಸವಿಯುಂಡಿತ್ತು.

ಸ್ವಚ್ಛತಾ ಕಾರ್ಯ‌
ಸ್ವಚ್ಛತಾ ಕಾರ್ಯ‌

ಇದುವರೆಗೆ ಒಟ್ಟು 25 ಟೆಸ್ಟ್ ಪಂದ್ಯಗಳಿಗೆ ಈ ಮೈದಾನ ವೇದಿಕೆಯಾಗಿದೆ. ಈ ಪೈಕಿ 11ರಲ್ಲಿ ಜಯದ ನಗೆ ಬೀರಿರುವ ಭಾರತ, ಏಳರಲ್ಲಿ ಸೋಲು ಕಂಡಿದೆ. ಉಳಿದ ನಾಲ್ಕು ಪಂದ್ಯಗಳು 'ಡ್ರಾ'ನಲ್ಲಿ ಮುಕ್ತಾಯವಾಗಿವೆ.

ಸದ್ಯ ಕೋವಿಡ್–19 ಭೀತಿ ಇರುವುದರಿಂದ ಮುಂಬೈ ಕ್ರಿಕೆಟ್ ಸಂಸ್ಥೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.ಮಹಾರಾಷ್ಟ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ, ಟೆಸ್ಟ್ ಪಂದ್ಯ ನಡೆಯುವ ಐದೂ ದಿನ ಶೇ 25 ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

ಸದ್ಯ ಭಾರತ ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ಇಲ್ಲಿ ನಡೆದ ಕೊನೇ ಪಂದ್ಯದಲ್ಲಿ (ಇಂಗ್ಲೆಂಡ್‌ ವಿರುದ್ಧ) 235 ರನ್ ಗಳಿಸಿ ಮಿಂಚಿದ್ದರು. ಕಳೆದ ಎರಡು ವರ್ಷಗಳಿಂದ ಶತಕದ ಬರ ಅನುಭವಿಸುತ್ತಿರುವ ಅವರು ಇಲ್ಲಿಯಾದರೂ ಮೂರಂಕಿ ಮೊತ್ತ ದಾಟಬಲ್ಲರೇ ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT