ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: ಅಶ್ವಿನ್‌ ಸ್ಪಿನ್‌ ದಾಳಿಗೆ ತತ್ತರಿಸಿದ ವಿಂಡೀಸ್‌

ಮೊದಲ ಇನಿಂಗ್ಸ್‌ 181 ರನ್‌ಗೆ ಆಲೌಟ್‌
Last Updated 6 ಅಕ್ಟೋಬರ್ 2018, 6:05 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಅಶ್ವಿನ್‌ ಸ್ಪಿನ್‌ ದಾಳಿಗೆ ತತ್ತರಿಸಿತು.

ಶುಕ್ರವಾರ ಭಾರತ ಮೊದಲ ಇನಿಂಗ್ಸ್‌ ಅಂತ್ಯಕ್ಕೆ149.5 ಓವರ್‌ಗಳಲ್ಲಿ 649 ರನ್‌ ಗಳಿಸಿತು ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ಎರಡನೇ ದಿನದಾಟದ ಅಂತ್ಯಕ್ಕೆ 29 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 94 ರನ್‌ ಗಳಿಸಿತ್ತು.

ಶನಿವಾರ ಮೂರನೇ ದಿನದಾಟ ಆರಂಭಿಸಿದ ರಾಸ್ಟನ್‌ ಚೇಸ್ (53), ಕೀಮೊ ಪೌಲ್‌ ಜೋಡಿಗೆ ಉಮೇಶ್‌ ಯಾದವ್‌ ಆಘಾತ ನೀಡಿದರು. ಬಳಿಕ ಕ್ರೀಸ್‌ಗೆ ಬಂದ ಶೆರ್ಮನ್‌ ಲೂಯಿಸ್‌ 00, ದೇವೇಂದ್ರ ಬಿಷೂ 17, ಶಾನನ್‌ ಗ್ಯಾಬ್ರಿಯೆಲ್‌ 01 ಅಶ್ವಿನ್‌ ಸ್ಪಿನ್‌ ಬಲೆಗೆ ಬಿದ್ದರು. ಈ ಮೂಲಕ ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌ 48 ಓವರ್‌ಗಳಲ್ಲಿ 181 ರನ್‌ಗೆ ಆಲೌಟ್‌ ಆಗಿದ್ದು, 468 ರನ್‌ ಹಿನ್ನಡೆ ಅನುಭವಿಸಿತು.

ಭಾರತದ ಪರ: ಆರ್‌ ಅಶ್ವಿನ್‌ 4, ಮೊಹಮ್ಮದ್‌ ಶಮಿ 2, ಉಮೇಶ್‌ ಯಾದವ್‌ 1, ರವೀಂದ್ರ ಜಡೇಜ 1, ಕುಲದೀಪ್‌ ಯಾದವ್‌ 1ವಿಕೆಟ್‌ ಪಡೆದರು.

ಸದ್ಯ ಎರಡನೇ ಇನಿಂಗ್ಸ್‌ ಆರಂಭಿಸಿರುವ ವೆಸ್ಟ್‌ ಇಂಡೀಸ್‌ 9ಓವರ್‌ಗಳಲ್ಲಿ 1ವಿಕೆಟ್‌ ನಷ್ಟಕ್ಕೆ33ರನ್‌ ಗಳಿಸಿದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT