ಮುಂಬೈ: ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣಗಳಲ್ಲಿ ಸೋಮವಾರ ನಡೆಯುತ್ತಿರುವ ಭಾರತ – ವೆಸ್ಟ್ ಇಂಡೀಸ್ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ಇದಾಗಿದ್ದು, ಹೋದ ಮೂರು ಪಂದ್ಯಗಳಲ್ಲಿಯೂ ವಿರಾಟ್ ಶತಕ ಬಾರಿಸಿ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ ಜಯಿಸಿದ್ದ ಭಾರತ ತಂಡವು ಮೂರನೇ ಪಂದ್ಯದಲ್ಲಿ ಸೋತಿತ್ತು. ಎರಡನೇ ಪಂದ್ಯವು ‘ಟೈ’ ಆಗಿತ್ತು. ಆದ್ದರಿಂದ ಇನ್ನುಳಿದ ಎರಡು ಪಂದ್ಯಗಳಲ್ಲಿಯೂ ಗೆದ್ದ ತಂಡವು ಸರಣಿ ಜಯ ಸಾಧಿಸಲಿದೆ. ಆದ್ದರಿಂದ ಈ ಪಂದ್ಯವು ಹೆಚ್ಚು ಕುತೂಹಲ ಕೆರಳಿಸಿದೆ.

ಸದ್ಯ ಆಟ ಮುಂದುವರಿಸಿರುವ ಭಾರತ 15ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 93ರನ್ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.