ಮುಂಬೈ: ‘ಮುಂಬೈಕರ್’ ರೋಹಿತ್ ಶರ್ಮಾ ಮತ್ತು ಹೈದರಾಬಾದಿನ ಅಂಬಟಿ ರಾಯುಡು ಅವರ ಶತಕಗಳ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಬೌಲರ್ಗಳು ಬಸವಳಿದರು.

ಇಲ್ಲಿಯ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವೆಸ್ಟ್ ಇಂಡೀಸ್ ಎದುರಿನ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ (162;137ಎಸೆತ, 20ಬೌಂಡರಿ, 4ಸಿಕ್ಸರ್) ಮತ್ತು ರಾಯುಡು (100; 81ಎಸೆತ, 8ಬೌಂಡರಿ, 4ಸಿಕ್ಸರ್) ಅವರ ಶತಕಗಳ ಬಲದಿಂದ 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 377 ರನ್ ಪೇರಿಸಿದೆ.

ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಕಳೆದ ಮೂರು ಪಂದ್ಯಗಳಲ್ಲಿ ಶತಕಗಳನ್ನು ದಾಖಲಿಸಿದ್ದ ನಾಯಕ ವಿರಾಟ್ ಕೊಹ್ಲಿ ಇಲ್ಲಿ ಕೇವಲ 16 ರನ್ ರನ್ ಗಳಿಸಿ ಔಟಾದರು. ರೋಹಿತ್ ಮತ್ತು ರಾಯುಡು ಮೂರನೇ ವಿಕೆಟ್ಗೆ 211 ರನ್ ಸೇರಿಸಿದರು. ಮಹೇಂದ್ರಸಿಂಗ್ ಧೋನಿ (23; 15 ಎಸೆತ, 2ಬೌಂಡರಿ) ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.