ಮಂಗಳವಾರ, ಏಪ್ರಿಲ್ 7, 2020
19 °C
ಶ್ರೀಲಂಕಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ನಿರ್ಣಾಯಕ ನಾಲ್ಕನೇ ಪಂದ್ಯ

ಭಾರತ ಮಹಿಳೆಯರಿಗೆ ಸರಣಿ ಗೆಲುವಿನ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೊಲಂಬೊ: ಎರಡು ಪಂದ್ಯಗಳನ್ನು ಗೆದ್ದು ಭರವಸೆಯಲ್ಲಿರುವ ಭಾರತ ಮಹಿಳಾ ತಂಡದವರು ಶ್ರೀಲಂಕಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಜಯದ ಗುರಿಯೊಂದಿಗೆ ಸೋಮವಾರ ಕಣಕ್ಕೆ ಇಳಿಯಲಿದ್ದಾರೆ.

ಐದು ಪಂದ್ಯಗಳ ಸರಣಿ ಮೊದಲ ಪಂದ್ಯದಲ್ಲಿ ಭಾರತ 13 ರನ್‌ಗಳಿಂದ ಗೆದ್ದಿತ್ತು. ಎರಡನೇ ಪಂದ್ಯ ಮಳೆಗೆ ಆಹುತಿಯಾಗಿತ್ತು. ಶನಿವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಭಾರತ ಐದು ವಿಕೆಟ್‌ಗಳಿಂದ ಗೆದ್ದಿತ್ತು.

ಸೋಮವಾರದ ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಶ್ರೀಲಂಕಾ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಕನಸು ಕಾಣಬೇಕಾದರೆ ಸೋಮವಾರ ಗೆಲ್ಲಲೇಬೇಕು. ಹೀಗಾಗಿ ಆ ತಂಡ ಒತ್ತಡದಲ್ಲಿದೆ.

ಮಹಿಳೆಯರ ಟ್ವೆಂಟಿ–20 ಏಷ್ಯಾ ಕಪ್‌ ಸೇರಿದಂತೆ ಕಳೆದ ಐದು ಪಂದ್ಯಗಳಲ್ಲಿ ಶ್ರೀಲಂಕಾ ಒಮ್ಮೆಯೂ ಭಾರತದ ವಿರುದ್ಧ ಗೆಲ್ಲಲಿಲ್ಲ. ಈ ಕಾರಣದಿಂದ ಭಾರತ ತಂಡ ಸೋಮವಾರವೂ ಸುಲಭ ಜಯ ಗಳಿಸುವ ನಿರೀಕ್ಷೆಯಲ್ಲಿದೆ.

ಜೆಮಿಮಾ ರಾಡ್ರಿಗಸ್‌, ನಾಯಕಿ ಹರ್ಮನ್ ಪ್ರೀತ್ ಕೌರ್‌, ಮಿಥಾಲಿ ರಾಜ್ ಮತ್ತು ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್‌ನಲ್ಲಿ ಭಾರತದ ಶಕ್ತಿ ಎನಿಸಿದ್ದು ಅರುಂಧತಿ ರೆಡ್ಡಿ, ಪೂನಂ ಯಾದವ್‌ ಮತ್ತು ಅನುಜಾ ಪಾಟೀಲ್ ಅವರೊಂದಿಗೆ ಹರ್ಮನ್‌ಪ್ರೀತ್ ಕೌರ್ ಬೌಲಿಂಗ್‌ಗೆ ಮೊನಚು ತುಂಬುತ್ತಿದ್ದಾರೆ. ನಿರ್ಣಾಯಕ ಪಂದ್ಯದಲ್ಲೂ ಇವರು ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದೆ ಭಾರತ ತಂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು