ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್ ಮಹಿಳಾ ತಂಡದೆದುರು ಉತ್ತಮ ಮೊತ್ತದತ್ತ ಭಾರತ

ಶುಭಾ ಸತೀಶ್‌ ಹಾಗೂ ಜೆಮಿಮಾ ರಾಡ್ರಿಗಸ್‌ ಅರ್ಧಶತಕ
Published 14 ಡಿಸೆಂಬರ್ 2023, 7:41 IST
Last Updated 14 ಡಿಸೆಂಬರ್ 2023, 7:41 IST
ಅಕ್ಷರ ಗಾತ್ರ

ಮುಂಬೈ: ಶುಭಾ ಸತೀಶ್‌ ಹಾಗೂ ಜೆಮಿಮಾ ರಾಡ್ರಿಗಸ್‌ ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.

ಇಲ್ಲಿನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಭಾರತ 4 ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (17) ಹಾಗೂ ಸ್ಫೋಟಕ ಬ್ಯಾಟರ್‌ ಶೆಫಾಲಿ ವರ್ಮಾ (19) ಬೇಗನೆ ಔಟಾದರು. ಈ ವೇಳೆ ಜೊತೆಯಾದ ಶುಭಾ ಸತೀಶ್‌ ಹಾಗೂ ಜೆಮಿಮಾ ರಾಡ್ರಿಗಸ್‌ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಶುಭಾ, 76 ಎಸೆತಗಳಲ್ಲಿ 69 ರನ್‌ ಗಳಿಸಿದ್ದಾಗ ಔಟಾದರು. ಶುಭಾ ವಿಕೆಟ್‌ ಪತನದ ಬಳಿಕ ಜೆಮಿಮಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರು 68 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

39 ಓವರ್‌ಗಳ ಆಟ ಪೂರ್ಣಗೊಂಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್‌ (6) ಹಾಗೂ ಇನ್ನೂ ಖಾತೆ ತೆರೆಯದ ಯಸ್ತಿಕಾ ಭಾಟಿಯಾ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT