ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್ ಟಿ20: ಪಾಕ್ ಎದುರು ಭಾರತ ಮಹಿಳಾ ತಂಡಕ್ಕೆ 13 ರನ್ ಅಂತರದಿಂದ ಸೋಲು

Last Updated 7 ಅಕ್ಟೋಬರ್ 2022, 11:06 IST
ಅಕ್ಷರ ಗಾತ್ರ

ಸಿಲ್ಹೆಟ್, ಬಾಂಗ್ಲಾದೇಶ: ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಶುಕ್ರವಾರ ಪಾಕಿಸ್ತಾನದೆದುರು ಸೋಲು ಕಂಡಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದ ಪಾಕ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬಿಸ್ಮಾ ಮರೂಫ್ ಬಳಗವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತ್ತು.

ಸಾಧಾರಣ ಮೊತ್ತ ಬೆನ್ನಿತ್ತಿದ ಭಾರತ 19.4 ಓವರ್‌ಗಳಲ್ಲಿ 124 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಪಾಕ್‌ ವಿರುದ್ಧ ಭಾರತ 13 ರನ್ ಅಂತರದಿಂದ ಸೋಲು ಅನುಭವಿಸಿದೆ. ರಿಚಾ ಘೋಷ್ 26, ದಯಾಳನ್ ಹೇಮಲತಾ 20, ಸ್ಮೃತಿ ಮಂದಾನ 17, ಸಬಿನೆನಿ ಮೇಘನಾ 15 ರನ್‌ ಗಳಿಸಿದರು.

ಪಾಕ್ ಪರ ನಶ್ರಾ ಸಂಧು 3, ನಿದಾ ದರ್, ಸಾದಿಯಾ ಇಕ್ಬಾಲ್ ತಲಾ ಎರಡು ವಿಕೆಟ್ ಕಬಳಿಸಿದರೆ, ಇತ್ತ ಐಮನ್ ಅನ್ವರ್, ತುಬಾ ಹಾಸನ್‌ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಲಂಕಾ, ಮಲೇಷ್ಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ ತಂಡಗಳ ಎದುರು ಸುಲಭ ಜಯ ಸಾಧಿಸಿದ್ದ ಭಾರತಕ್ಕೆ ಬಿಸ್ಮಾ ಮರೂಫ್ ಬಳಗವು ಕಠಿಣ ಸವಾಲೊಡ್ಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT