ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೃತಿ, ಹರ್ಮನ್‌ಪ್ರೀತ್‌ ಉತ್ತಮ ಆಟ: ಟಿ20 ಸರಣಿ ಗೆದ್ದ ಭಾರತ

Last Updated 25 ಜೂನ್ 2022, 17:32 IST
ಅಕ್ಷರ ಗಾತ್ರ

ದಂಬುಲಾ: ಕೊನೆಯ ಓವರ್‌ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ಭಾರತದ ಮಹಿಳೆಯರು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು 2–0 ರಲ್ಲಿ ಗೆದ್ದುಕೊಂಡರು.

ದಂಬುಲಾದಲ್ಲಿ ಶನಿವಾರ ಆತಿಥೇಯ ತಂಡ 7 ವಿಕೆಟ್‌ಗೆ 125 ರನ್‌ ಗಳಿಸಿದರೆ, ಭಾರತ 19.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ಸ್ಮೃತಿ ಮಂದಾನ (39ರನ್, 34 ಎ, 4X8), ಎಸ್‌.ಮೇಘನಾ (17 ರನ್, 10 ಎ., 4X4) ಮತ್ತು ಅಜೇಯ 31 ರನ್‌ (32 ಎ., 4X2) ಗಳಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅವರು ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡಕ್ಕೆ ವಿಷ್ಮಿ ಗುಣರತ್ನೆ (45) ಮತ್ತು ಚಾಮರಿ ಅಟಪಟ್ಟು (43) ಮೊದಲ ವಿಕೆಟ್‌ಗೆ 87 ರನ್‌ ಸೇರಿಸಿ, ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಆ ಬಳಿಕ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಸರಣಿಯ ಮೊದಲ ಪಂದ್ಯದಲ್ಲಿ ಭಾರತ 34 ರನ್‌ಗಳ ಜಯ ಸಾಧಿಸಿತ್ತು. ಸೋಮವಾರ ನಡೆಯಲಿರುವ ಕೊನೆಯ ಪಂದ್ಯ ಮಹತ್ವ ಕಳೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 7ಕ್ಕೆ 125 (20 ಓವರ್) ವಿಷ್ಮಿ ಗುಣರತ್ನೆ 45, ಚಾಮರಿ ಅಟಪಟ್ಟು 43, ದೀಪ್ತಿ ಶರ್ಮ 34ಕ್ಕೆ 2, ರೇಣುಕಾ ಸಿಂಗ್‌ 26ಕ್ಕೆ 1, ರಾಧಾ ಯಾದವ್ 15ಕ್ಕೆ 1, ಪೂಜಾ ವಸ್ತ್ರಕರ್‌ 18ಕ್ಕೆ 1)

ಭಾರತ 5ಕ್ಕೆ 127 (19.1 ಓವರ್) ಸ್ಮೃತಿ ಮಂದಾನ 39, ಶಫಾಲಿ ವರ್ಮ 17, ಎಸ್‌.ಮೇಘನಾ 17, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 31, ಇನೊಕ ರಣವೀರ 18ಕ್ಕೆ 2)

ಫಲಿತಾಂಶ: ಭಾರತಕ್ಕೆ 5 ವಿಕೆಟ್ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT