ಶನಿವಾರ, ಜುಲೈ 2, 2022
25 °C

ಇಂಡಿಯನ್ ಓಪನ್ ಸರ್ಫಿಂಗ್: ಫೈನಲ್‌ಗೆ ಇಶಿತಾ, ಸಿಂಚನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆತಿಥೇಯ ಕರ್ನಾಟಕದ ಇಶಿತಾ ಮಾಳವಿಯಾ ಹಾಗೂ ಸಿಂಚನಾ ಗೌಡ, ಇಲ್ಲಿನ ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ.

ಗೋವಾದ ಶುಗರ್ ಬನಾರ್ಸೆ ಹಾಗೂ ತಮಿಳುನಾಡಿನ ಸೃಷ್ಟಿ ಸೆಲ್ವಂ ಕೂಡ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ವಿಭಾಗದ ಮೊದಲ ಹೀಟ್ಸ್‌ನಲ್ಲಿ ಶ್ರೀಕಾಂತ್‌ ಡಿ, ಸತೀಶ್‌ ಸರವಣನ್‌, ಸೂರ್ಯ ಪಿ, ರುಬಾನ್‌ ವಿ ಹಾಗೂ ಎರಡನೇ ಹೀಟ್ಸ್‌ನಲ್ಲಿ ರಮೇಶ್‌ ಬೂದಿಹಾಳ, ಅಜೀಶ್‌ ಅಲಿ, ಸಂಜಯ ಕುಮಾರ್ ಎಸ್‌, ಮಣಿಕಂಠನ್‌ ಎಂ ಆಯ್ಕೆಯಾಗಿದ್ದಾರೆ.

‘ವಿಶ್ವ ಸರ್ಫ್ ಲೀಗ್‌ನಲ್ಲಿ ಸ್ಪರ್ಧಿ ಸುವ ಹುಮ್ಮಸ್ಸಿನಲ್ಲಿದ್ದೇನೆ’ ಎಂದು ಕೋವಳಂನ 22 ವರ್ಷದ ಸರ್ಫರ್ ರಮೇಶ್ ಬೂದಿಹಾಳ ಕನಸು ಹಂಚಿ ಕೊಂಡರು. ಭಾನುವಾರ ಪುರುಷರ ಸೆಮಿಫೈನಲ್‌ ಹಾಗೂ ಫೈನಲ್‌, ಬಾಲಕಿಯರ ಫೈನಲ್‌ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು