ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಬೆಂಗಳೂರಿನಲ್ಲಿ ನಡೆಯುವ 10 ಪಂದ್ಯಗಳ ವಿವರ ಇಂತಿದೆ

Last Updated 7 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್‌ ಟಿ20 ಟೂರ್ನಿಯ ಲೀಗ್ ಹಂತದ ಹತ್ತು ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಆತಿಥ್ಯ ವಹಿಸಲಿದೆ.

ಏಪ್ರಿಲ್ 9ರಂದು ಟೂರ್ನಿಯ ಉದ್ಘಾಟನೆ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಆದರೆ, ಬೆಂಗಳೂರಿನಲ್ಲಿ ಈ ಟೂರ್ನಿಯ ಮೊದಲ ಪಂದ್ಯವು ಮೇ 9ರಂದು ಆಯೋಜನೆಗೊಂಡಿದೆ. ಅಂದು ಮಧ್ಯಾಹ್ನ 3.30ರಿಂದ ಆರಂಭವಾಗುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಒಟ್ಟು 56 ಲೀಗ್ ಪಂದ್ಯಗಳು ನಡೆಯಲಿವೆ. ಇದರಲ್ಲಿ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತದಲ್ಲಿ ತಲಾ 10 ಪಂದ್ಯಗಳು ನಡೆಯಲಿವೆ. ಅಹಮದಾಬಾದ್ ಮತ್ತು ದೆಹಲಿಯಲ್ಲಿ ತಲಾ ಎಂಟು ಪಂದ್ಯಗಳು ಆಯೋಜನೆಗೊಂಡಿವೆ.

11 ಡಬಲ್ ಹೆಡರ್: ಒಟ್ಟು 11 ಡಬಲ್ ಹೆಡರ್‌ಗಳು (ದಿನವೊಂದರಲ್ಲಿ ಎರಡು ಪಂದ್ಯ) ನಿಗದಿಯಾಗಿವೆ. ಮಧ್ಯಾಹ್ನ 3.30 ಮತ್ತು ಇನ್ನೊಂದು ಪಂದ್ಯವು ರಾತ್ರಿ 7.30ಕ್ಕೆ ಆರಂಭವಾಗಲಿವೆ. ಐಪಿಎಲ್ ವೇಳಾಪಟ್ಟಿಯ ಪ್ರಕಾರ ಎಲ್ಲ ಎಂಟು ತಂಡಗಳು ಲೀಗ್ ಹಂತದಲ್ಲಿ ಮೂರು ಬಾರಿ ಮಾತ್ರ ಒಂದು ತಾಣದಿಂದ ಮಗದೊಂದು ತಾಣಕ್ಕೆ ಪ್ರಯಾಣಿಸಲಿದೆ. ಈ ಮೂಲಕ ಕೋವಿಡ್ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗಿದೆ.

ಬಂಗಾಳ ಚುನಾವಣೆ: ಮೇ 6ರವರೆಗೆ ಟೂರ್ನಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯುತ್ತವೆ. ಆದರೆ ಈ ಅವಧಿಯಲ್ಲಿ ಕೋಲ್ಕತ್ತದಲ್ಲಿ ಯಾವುದೇ ಪಂದ್ಯಗಳನ್ನು ಆಯೋಜಿಸಲಾಗಿಲ್ಲ. ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಕಾರಣದಿಂದ ಮೇ ಎರಡನೇ ವಾರದಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಈ ಬಾರಿಯ ವಿವೊ ಐಪಿಎಲ್‌ನ ವಿಶೇಷತೆ ಏನೆಂದರೆ, ಯಾವುದೇ ತಂಡವೂ ತಮ್ಮ ತವರು ಅಂಗಳದಲ್ಲಿ ಒಂದೂ ಪಂದ್ಯವನ್ನೂ ಆಡುವುದಿಲ್ಲ. ಆದ್ದರಿಂದ ಎಲ್ಲವೂ ತಟಸ್ಥ ತಾಣಗಳಾಗಿವೆ’ ಎಂದು ಐಪಿಎಲ್ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT